ನವದೆಹಲಿ: ನೋಟು ನಿಷೇಧದ ನಂತರ ಹೊಸದಾಗಿ ಬಿಡುಗಡೆಯಾದ 2000 ರೂ. ನೋಟುಗಳ ಮುದ್ರಣವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಗಿತಗೊಳಿಸಿದೆ. ಅದರ ಬದಲಿಗೆ 200 ರೂ. ನೋಟುಗಳ ಮುದ್ರಣಕ್ಕೆ ತಯಾರಿ ಆರಂಭಿಸಿದೆ.
‘ಐದು ತಿಂಗಳಿನಿಂದ ಆರ್ ಬಿಐ 2000 ರೂ. ನೋಟುಗಳ ಮುದ್ರಣ ನಿಲ್ಲಿಸಿತ್ತು. ಈ ವರ್ಷ ಪೂರ್ತಿ ಈ ನೋಟುಗಳ ಮುದ್ರಣ ಮಾಡುವುದು ಅನುಮಾನ’ ಎಂದು ಆರ್ ಬಿಐ ಮೂಲಗಳು ಹೇಳಿವೆ. ಮೈಸೂರಿನಲ್ಲಿರುವ ಆರ್ ಬಿಐ ಮುದ್ರಣ ಸಂಸ್ಥೆಯಲ್ಲಿ ಈಗಾಗಲೇ 200 ರೂ. ನೋಟುಗಳ ಮುದ್ರಣ ಪ್ರಾರಂಭವಾಗಿದ್ದು, ಮುಂದಿನ ತಿಂಗಳಿನಿಂದ ಚಲಾವಣೆಗೆ ಬರಬಹುದೆಂದು ಮೂಲಗಳು ಹೇಳಿವೆ.
ಇದೀಗ 200 ರೂ. ನೋಟುಗಳ ಭದ್ರತೆ, ಸುರಕ್ಷತೆ, ಗುಣಮಟ್ಟದ ಪರಿಶೀಲನೆ ನಡೆಯುತ್ತಿದೆ. ಇದರ ನಂತರ ನೋಟುಗಳು ಚಲಾವಣೆಯಾಗಬಹುದು ಎನ್ನಲಾಗಿದೆ. 2000 ರೂ. ನೋಟುಗಳ ಮುದ್ರಣ ಸ್ಥಗಿತಗೊಳಿಸಿರುವುದರಿಂದ ಸಾರ್ವಜನಿಕರು ಆತಂಕಗೊಳ್ಳಬೇಕಿಲ್ಲ. 2000 ರೂ. ನೋಟು ಚಲಾವಣೆಯಲ್ಲಿರುತ್ತದೆ. ಆದರೆ ನೋಟುಗಳ ಪೂರೈಕೆ ಕೊಂಚ ಕಡಿಮೆಯಾಗಬಹುದೇನೋ ಎಂದು ಆರ್ ಬಿಐ ಸ್ಪಷ್ಟನೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ