ಅಂತಾರಾಷ್ಟ್ರೀಯ ಮಾರುಕಟ್ಟೆಯ ವಹಿವಾಟಿನ ಏರಿಳಿತಗಳಿಂದಾಗಿ ಪೆಟ್ರೋಲ್ ದರದಲ್ಲಿ 13 ಪೈಸೆ ಹೆಚ್ಚಳವಾಗಿದ್ದರೇ ಡೀಸೆಲ್ ದರದಲ್ಲಿ 12 ಪೈಸೆ ಕಡಿತವಾಗಿದೆ.
ದೇಶದ ಬೃಹತ್ ತೈಲ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೋರೇಶನ್, ಡೀಸೆಲ್ ದರದಲ್ಲಿ 12 ಪೈಸೆ ದರ ಕಡಿತ ಘೋಷಿಸಿದೆ.
ಇಂದು ಮಧ್ಯ ರಾತ್ರಿಯಿಂದ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 66.10 ರೂಪಾಯಿಗಳಿಗೆ ತಲುಪಿದೆ. ಅದರಂತೆ, ಡೀಸೆಲ್ ದರ ಪ್ರತಿ ಲೀಟರ್ಗೆ 52.57 ರೂಪಾಯಿಗಳಿಗೆ ತಲುಪಿದೆ.
ಕಳೆದ ನವೆಂಬರ್ 15 ರಂದು ಪೆಟ್ರೋಲ್ ದರದಲ್ಲಿ 1.46 ರೂಪಾಯಿ ಕಡಿತವಾಗಿತ್ತು. ಅದೇ ಡೀಸೆಲ್ ದರದಲ್ಲಿ ಕೂಡಾ 1.53 ರೂಪಾಯಿಗಳಿಗೆ ಇಳಿಕೆಯಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.