Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೈನಿಕರಿಗೆ ಶೃದ್ಧಾಂಜಲಿ ಅರ್ಪಿಸಲು ನಿರಾಕರಿಸಿದ ಪ್ರಧಾನಿ ಮೋದಿ ಸರಕಾರ: ರಾಹುಲ್ ಗಾಂಧಿ

ಸೈನಿಕರಿಗೆ ಶೃದ್ಧಾಂಜಲಿ ಅರ್ಪಿಸಲು ನಿರಾಕರಿಸಿದ ಪ್ರಧಾನಿ ಮೋದಿ ಸರಕಾರ: ರಾಹುಲ್ ಗಾಂಧಿ
ನವದೆಹಲಿ , ಬುಧವಾರ, 30 ನವೆಂಬರ್ 2016 (17:06 IST)
ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತಂದು ಕೇಂದ್ರ ಸರಕಾರ ಕಪ್ಪು ಹಣ ಹೊಂದಿದವರಿಗೆ ಅರ್ಧ ಹಣವನ್ನು ಹಿಂದುರಿಗಿಸುವ ಮೂಲಕ ಪರೋಕ್ಷವಾಗಿ ನೆರವಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
 
ಕೇಂದ್ರ ಸರಕಾರ ಕಪ್ಪು ಹಣ ಹೊಂದಿದವರಿಗೆ ಶೇ.50 ರಷ್ಟು ಹಣವನ್ನು ಹಿಂತಿರುಗಿಸಲು ನಿರ್ಧರಿಸಿರುವುದು ಜನವಿರೋಧಿ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ನಿನ್ನೆ ಲೋಕಸಭೆಯಲ್ಲಿ ಆದಾಯ ತೆರಿಗೆ ಕಾನೂನಿಗೆ ತಿದ್ದುಪಡಿ ತಂದು ಕಪ್ಪು ಹಣ ಹೊಂದಿದವರು ತಮ್ಮಲ್ಲಿರುವ ಙಮದ ಮೊತ್ತವನ್ನು ಬಹಿರಂಗಪಡಿಸಿದಲ್ಲಿ ಶೇ.50 ರಷ್ಟು ಹಣವನ್ನು ಹಿಂತಿರುಗಿಸಲು ಅನುವಾಗುವಂತೆ ಕಾನೂನು ರೂಪಿಸಿದೆ. 
 
ದೇಶದ ನಾಯಕರಾಗಲಿ ಅಥವಾ ಸೈನಿಕರಾಗಲಿ ಹುತಾತ್ಮರಾದಾಗ ಸಂಸತ್ತಿನಲ್ಲಿ ಪ್ರತಿ ಬಾರಿ ಶೋಕಾಚರಣೆ ನಡೆಸಿ ಗೌರವ ವಂದನೆ ಸಲ್ಲಿಸಲಾಗುತ್ತದೆ. ಆದರೆ, ಮೊದಲ ಬಾರಿ ನಾಗ್ರೋಟಾ ಸೇನಾ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹತರಾದ ಸೈನಿಕರಿಗೆ ಶೋಕ ಸಂತಾಪ ಸೂಚನೆಗೆ ಕೂಡಾ ಸಂಸತ್ತಿನಲ್ಲಿ ಆಸ್ಪದ ವಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವಿಪಕ್ಷಗಳು ಕಲಾಪವನ್ನು ಬಹಿಷ್ಕರಿಸಿವೆ.  
 
ನಾಗ್ರೋಟಾ ಸೇನಾ ಕೇಂದ್ರದಲ್ಲಿ ಇನ್ನೂ ಸೇನಾಪಡೆಗಳ ಕೊಂಬಿಂಗ್ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಸದನದಲ್ಲಿ ಶೋಕ ಸಂತಾಪ ಸಾಧ್ಯವಿಲ್ಲ ಎಂದು ಸಭಾಪತಿ ತಳ್ಳಿಹಾಕಿದ ಹಿನ್ನೆಲೆಯಲ್ಲಿ ವಿಪಕ್ಷಗಳು ಕಲಾಪವನ್ನು ಬಹಿಷ್ಕರಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಾಟ್ಸಪ್‌ನಲ್ಲಿ ಮೋದಿ ಆಕ್ಷೇಪಾರ್ಹ ಚಿತ್ರ ಬಳಕೆ: ಇಬ್ಬರು ಅಧಿಕಾರಿಗಳು ಸಸ್ಪೆಂಡ್