ನವದೆಹಲಿ: ಮತ್ತೆ ಈರುಳ್ಳಿ ಬೆಲೆ ಗಗನಕ್ಕೇರಿದೆ. ಹಿಂದೊಮ್ಮೆ ಇದೇ ರೀತಿ ಏರಿಕೆಯಾಗಿ ಪ್ರತೀ ಕೆ.ಜಿಗೆ 100 ರೂ.ವರೆಗೆ ತಲುಪಿದ್ದ ಈರುಳ್ಳಿ ಬೆಲೆ ಗ್ರಾಹಕರಿಗೆ ಕಣ್ಣೀರು ತರಿಸಿತ್ತು. ಇದೀಗ ಮತ್ತೆ ಪ್ರತಿ ಕೆಜಿಗೆ 60 ರೂ. ದಾಟಿದೆ.
ಮಳೆ ತಂದ ಅವಾಂತರದಿಂದ ಸಾಕಷ್ಟು ಬೆಳೆ ಇಲ್ಲದೇ ಬೆಲೆ ದುಪ್ಪಟ್ಟಾಗಿದೆ. ಈರುಳ್ಳಿ ಮಾತ್ರವಲ್ಲ, ಟೊಮೆಟೊ, ಆಲೂಗಡ್ಡೆ ಬೆಲೆಯೂ ಹೆಚ್ಚಳವಾಗುತ್ತಿದೆ.
ಟೊಮೆಟೋ ಈಗಾಗಲೇ ಬೆಂಗಳೂರಿನಲ್ಲಿ ಪ್ರತೀ ಕೆಜಿಗೆ 30 ರಿಂದ 40 ರೂ.ವರೆಗೆ ತಲುಪಿದ್ದು, ಗ್ರಾಹಕರು ಪರದಾಡುವಂತಾಗಿದೆ. ಈರುಳ್ಳಿ ಬೆಳೆಯುವ ಎಲ್ಲಾ ರಾಜ್ಯಗಳಲ್ಲೂ ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾಗಿರುವುದೇ ಈ ಏರಿಕೆಗೆ ಕಾರಣವೆಂದು ವಿಶ್ಲೇಷಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ