ನವದೆಹಲಿ : ಹಸಿವನ್ನು ತಣಿಸಲು ಒಮ್ಮಲೆ ಸಿಕ್ಕಾಪಟ್ಟೆ ತಿಂದುಬಿಡುತ್ತೇವೆ. ಆಮೇಲೆ ತೂಕ ಇಳಿಸಲು ಹರಸಾಹಸ ಪಡುತ್ತೇವೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಅಮೆಜಾನ್ ಪಾವ್ಲೋಕ್ ಬ್ರೇಸ್ ಲೈಟ್ ಎಂಬ ಆಹಾರ ಸೇವನೆಯನ್ನು ನಿಯಂತ್ರಿಸುವ ಸಾಧನವೊಂದನ್ನು ಮಾರಾಟ ಮಾಡುತ್ತಿದೆ.
ಪಾವ್ಲೋಕ್ ಬ್ರೇಸ್ ಲೈಟ್ ನಲ್ಲಿ 350 ವೋಲ್ಟ್ ವಿದ್ಯುತ್ ಶಾಕ್ ಅನ್ನು ಅಳವಡಿಸಲಾಗಿದೆ. ಇದನ್ನು ಧರಿಸಿದವರು ಮಿತಿಗಿಂತ ಹೆಚ್ಚು ಆಹಾರವನ್ನು ತಿಂದರೆ ವಿದ್ಯುತ್ ಶಾಕ್ ನೀಡುತ್ತದೆ. ಅಲ್ಲದೇ ನೀವು ಸೇವಿಸಿದ ಆಹಾರದ ಕ್ಯಾಲೊರಿಯನ್ನು ಪರಿಶೀಲಿಸಲು ಆ್ಯಪ್ ವೊಂದನ್ನು ಈ ಪಾವ್ಲೋಕ್ ಬ್ರೇಸ್ ಲೈಟ್ ಹೊಂದಿದ್ದು, ಕ್ಯಾಲೊರಿ ಹೆಚ್ಚಾದಂತೆ ಬ್ರೇಸ್ ಲೈಟ್ ಎಚ್ಚರಿಕೆಯನ್ನು ನೀಡುತ್ತದೆ.
ಹಾಗೇ ಈ ಈ ಬ್ರೆಸ್ ಲೈಟ್ ಆಹಾರಕ್ಕೆ ಮಾತ್ರ ಸೀಮಿತವಾಗಿಲ್ಲ, ಜೊತೆಗೆ ಇಂಟರ್ನೆಟ್, ಟಿ.ವಿ ವೀಕ್ಷಣೆ, ವಿಡಿಯೋ ಗೇಮ್ಸ್ ಮೇಲೆಯೂ ನಿಗಾ ವಹಿಸುತ್ತದೆ. ಅತಿಯಾದ ಟಿ.ವಿ ವೀಕ್ಷಣೆ, ಇಂಟರ್ ನೆಟ್ ಬಳಕೆ ಮಾಡಿದರೂ ಕೂಡ ಎಚ್ಚರಿಕೆ ನೀಡುತ್ತದೆ. ಅಮೆಜಾನ್ ನಲ್ಲಿ ಲಭ್ಯವಿರುವ ಪಾವ್ಲೋಕ್ ಬ್ರೇಸ್ ಲೈಟ್ ಬೆಲೆ $199(ರೂ.13900)ಗಳಾಗಿದ್ದು, ಇದು ಒಮ್ಮೆ ಚಾರ್ಜ್ ಮಾಡಿದರೆ 150 ಬಾರಿ ಎಚ್ಚರಿಕೆ ನೀಡುತ್ತದೆ.