Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಫೆಬ್ರವರಿ 1 ರಿಂದ ಹೊಸ ಕೇಬಲ್ ನೀತಿ ಜಾರಿ; ಕೂಡಲೇ ಆಯ್ಕೆ ಮಾಡಿ ನಿಮ್ಮ ಇಷ್ಟದ ಚಾನೆಲ್

ಫೆಬ್ರವರಿ 1 ರಿಂದ ಹೊಸ ಕೇಬಲ್ ನೀತಿ ಜಾರಿ; ಕೂಡಲೇ  ಆಯ್ಕೆ ಮಾಡಿ ನಿಮ್ಮ ಇಷ್ಟದ ಚಾನೆಲ್
ಬೆಂಗಳೂರು , ಮಂಗಳವಾರ, 29 ಜನವರಿ 2019 (08:35 IST)
ಬೆಂಗಳೂರು : ಕೇಬಲ್ ಟಿವಿ ಮತ್ತು ಡಿಟಿಹೆಚ್ ನ ಅಸ್ತಿತ್ವದಲ್ಲಿರುವ ನಿಯಮಗಳು ಜನವರಿ 31, 2019 ರಿಂದ ರದ್ದಾಗಲಿದ್ದು, ಫೆಬ್ರವರಿ 1 ರಿಂದ ಹೊಸ ಕೇಬಲ್ ನೀತಿ ಜಾರಿಗೆ ಬರಲಿದೆ.


ಕೇಬಲ್ ಟಿವಿ ಮತ್ತು ಡಿಟಿಹೆಚ್ ದರದ ಮಾಹಿತಿಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವೆಬ್ಸೈಟ್ ನಲ್ಲಿ ಪ್ರಕಟಿಸಿದ್ದು, ಟ್ರಾಯ್ ನಿಯಮದ ಪ್ರಕಾರ ಜನವರಿ 31 ರೊಳಗೆ ಗ್ರಾಹಕರು ತಮಗೆ ಇಷ್ಟವಾದ ಪೇ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು.


ಕನ್ನಡದ ಪೇಯ್ಡ್ ಚಾನೆಲ್ ಗಳ ದರ ಇಂತಿದೆ: ನ್ಯೂಸ್ 18 ಕನ್ನಡ 25 ಪೈಸೆ, ಸ್ಟಾರ್ ಸ್ಪೋರ್ಟ್ಸ್ ಕನ್ನಡ 19 ರೂ., ಚಿಂಟು ಟಿವಿ ಕನ್ನಡ 6 ರೂ., ಉದಯ ಕಾಮಿಡಿ 6 ರೂ., ಉದಯ ಮೂವೀಸ್ 16 ರೂ., ಉದಯ ಮ್ಯೂಸಿಕ್ 6 ರೂ., ಉದಯ ಟಿವಿ 17 ರೂ., ಕಲರ್ಸ್ ಕನ್ನಡ 19 ರೂ., ಸ್ಟಾರ್ ಸುವರ್ಣ 19 ರೂ., ಜೀ ಕನ್ನಡ 19 ರೂ., ಸುವರ್ಣ ಪ್ಲಸ್ ಚಾನಲ್ ಗೆ 5 ರೂ. ದರ ಇದೆ.
ಡಿಸ್ಕವರಿ ಚಾನೆಲ್ ಗೆ 4 ರೂ., ಡಿಸ್ಕವರಿ ಕಿಡ್ಸ್ ಚಾನೆಲ್ ಗೆ 3 ರೂ., ಅನಿಮಲ್ ಪ್ಲಾನೆಟ್ ಗೆ 24 ರೂ. ದರ ನಿಗದಿ ಮಾಡಲಾಗಿದೆ. ಸ್ಪೋರ್ಟ್ಸ್  ಚಾನೆಲ್ ಗಳಾದ ಸೋನಿ ಇ.ಎಸ್.ಪಿ.ಎನ್. ಹೆಚ್ ಡಿಗೆ 7 ರೂ., ಸೋನಿ ಇ.ಎಸ್.ಪಿ.ಎನ್. ಗೆ 5 ರೂ., ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಗೆ 4 ರೂ. ದರ ನಿಗದಿ ಮಾಡಲಾಗಿದೆ.


ಬೇಸಿಕ್ ಪ್ಯಾಕೇಜ್ ನಲ್ಲಿ 130 ರೂ.ಗೆ 100 ಟಿವಿ ಚಾನೆಲ್ ಸಿಗುತ್ತದೆ. ಆದರೆ ಇದಕ್ಕೆ ಜಿ.ಎಸ್.ಟಿ. ಸೇರಿ 153 ರೂ. ಪಾವತಿಸಬೇಕಿದೆ. ಹಾಗೇ 100 ಕ್ಕಿಂತ ಹೆಚ್ಚು ಚಾನೆಲ್ ವೀಕ್ಷಿಸಲು ರೂ. 20ಕ್ಕೆ 25 ಚಾನೆಲ್ ಗಳ ಸ್ಲ್ಯಾಬ್ ಪಡೆಯಬಹುದು. ಪೇಡ್ ಚಾನೆಲ್ ಗಳ ಆಯ್ಕೆಯೊಂದಿಗೆ ಪಾವತಿಸಬೆಕಾಗುವ ಬಿಲ್ ಕೂಡ ಏರಿಕೆಯಾಗುತ್ತದೆ. ಉಚಿತ ಚಾನೆಲ್ ಗಳ ಸೇವೆ ಹಿಂದಿನಂತೆಯೇ ಮುಂದುವರೆಯಲಿದ್ದು, ಪೇಯ್ಡ್ ಚಾನೆಲ್ ಗಳ ಸೇವೆಯಲ್ಲಿ ಬದಲಾವಣೆಯಾಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಸೈನಿಕನ ವೇಷ ಹಾಕಿ OLXನಲ್ಲಿ ವಾಹನ ಸೇಲ್ ಗಿಟ್ಟು ಮೋಸ ಮಾಡುವವರಿದ್ದಾರೆ ಎಚ್ಚರಿಕೆ