Webdunia - Bharat's app for daily news and videos

Install App

ನಿಮ್ಮ ಸ್ಥಳವನ್ನು ಸುಲಭವಾಗಿ ತಲುಪುವಂತೆ ಮಾಡುತ್ತಿದೆ ಮೆಟ್ರೋ...!

ಗುರುಮೂರ್ತಿ
ಗುರುವಾರ, 22 ಫೆಬ್ರವರಿ 2018 (16:06 IST)
ಗಾರ್ಡನ್ ಸಿಟಿಯಲ್ಲಿ ಮೆಟ್ರೋ ಪ್ರಯಾಣಿಕರು ಇನ್ನು ಮುಂದೆ ಪರದಾಡಬೇಕಿಲ್ಲ ತಮ್ಮ ಪ್ರಯಾಣವನ್ನು ಯಾವುದೇ ಅಡೆತಡೆ ಇಲ್ಲದೇ ರೈಲು ಇಳಿದ ಬಳಿಕವು ಸುಲಭವಾಗಿ ಪೂರೈಸಿಕೊಳ್ಳಬಹುದಾಗಿದೆ. ಅಲ್ಲದೇ ನಿಗದಿಪಡಿಸಿದ ಸಮಯಕ್ಕೆ ಯಾವುದೇ ಕಿರಿಕಿರಿ ಇಲ್ಲದೇ ತಲುಪಬಹುದಾಗಿದೆ ಅದು ಹೇಗೆ ಅಂತೀರಾ ಇಲ್ಲಿದೆ ವರದಿ.
ಬೆಂಗಳೂರು ನಗರದ 36 ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ಬೈಕ್ ಸಂಸ್ಥೆ ಬಾಡಿಗೆ ಬೈಕ್‌ ಸೇವೆಯನ್ನು ಪ್ರಾರಂಭಿಸಿದ್ದು, ನೀವು ಮೆಟ್ರೋ ನಿಲ್ದಾಣಗಳಲ್ಲಿ ಇಳಿದ ನಂತರ ಅಲ್ಲಿರುವ ಬಾಡಿಗೆ ಬೈಕನ್ನು ಪಡೆದು ನಿಮ್ಮ ಪ್ರಯಾಣವನ್ನು ಸುಲಭವಾಗಿ ಪೂರೈಸಿಕೊಳ್ಳಬಹುದು. ಈ ಸೇವೆಯು ಸಂಪಿಗೆ ರಸ್ತೆ ನಿಲ್ದಾಣ, ಕಬ್ಬನ್ ಉದ್ಯಾನ, ಎಸ್ ಎಂ ವಿಶ್ವೇಶ್ವರಯ್ಯ, ಹೊಸಹಳ್ಳಿ ನಿಲ್ದಾಣವನ್ನು ಹೊರತುಪಡಿಸಿ ಉಳಿದ ಎಲ್ಲಾ ನಿಲ್ದಾಣಗಳಲ್ಲಿಯೂ ಈ ಸೇವೆ ಲಭ್ಯವಿರುತ್ತದೆ.
 
ಪ್ರತಿ ಮೆಟ್ರೋ ನಿಲ್ದಾಣದಲ್ಲಿ 20 ರಿಂದ 100 ಬೈಕುಗಳಿದ್ದು ಇದರಲ್ಲಿ ಇಲೆಕ್ಟ್ರಿಕ್ ಬೈಕುಗಳು ಮತ್ತು ಸೈಕಲ್ಲುಗಳು ಇರಲಿವೆ. ಅಲ್ಲದೇ ಇದಕ್ಕಾಗಿ ಒಂದು ಅಪ್ಲಿಕೇಶನ್ ಅನ್ನು ಸಹ ಸಂಸ್ಥೆ ಸಿದ್ಧಪಡಿಸಿದ್ದು ಅದರ ಮೂಲಕ ನೀವು ಸುಲಭವಾಗಿ ಬೈಕನ್ನು ಬಾಡಿಗೆ ಪಡೆಯಬಹುದಾಗಿದೆ.
ಪ್ರಯಾಣಿಕರ ಪ್ರಯಾಣವನ್ನು ಸುಲಭವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಸಂಸ್ಥೆ ಈ ಸೇವೆಯನ್ನು ಒದಗಿಸುತ್ತಿದ್ದು, ನೀವು ಬೈಕ್ ಪಡೆದುಕೊಂಡ ನಿಲ್ದಾಣದಿಂದ, ಬೈಕನ್ನು ಮರಳಿಸಲು ನೀವು ಅದೇ ನಿಲ್ದಾಣಕ್ಕೆ ಬರಬೇಕಿಲ್ಲ. ನಗರದಲ್ಲಿ ಎಲ್ಲಿ ಬೇಕಾದರೂ ನಿಮ್ಮ ಪ್ರಯಾಣ ಮುಕ್ತಾಯವಾದ ಬಳಿಕ ಬೈಕ್ ಅನ್ನು ನಿಲ್ಲಿಸಬಹುದಾಗಿದೆ. ಆದರೆ ನೀವು ನಿಲ್ಲಿಸುವ ಸ್ಥಳವನ್ನು ಸಂಸ್ಥೆಗೆ ತಿಳಿಸಬೇಕಾಗುತ್ತದೆ ಮತ್ತು ಸಂಸ್ಥೆಯಿಂದ ಆ ಸ್ಥಳವು ಖಚಿತಗೊಂಡ ಬಳಿಕವಷ್ಟೇ ನೀವು ಬೈಕ್ ಅನ್ನು ಪಾರ್ಕ್ ಮಾಡಬಹುದಾಗಿದೆ. ಇವೆಲ್ಲವೂ ಅಪ್ಲಿಕೇಶನ್ ಮೂಲಕವೇ ಮಾಡಬಹುದಾಗಿದೆ.
 
ಈ ಸೇವೆಯನ್ನು ಉತ್ತಮವಾಗಿಸಲು ಮತ್ತು ಸುಲಭವಾಗಿಸಲು ಸಂಸ್ಥೆಯು ಬಾಡಿಗೆ ಪಾವತಿ ವಿಧಾನವನ್ನು ಸರಳಗೊಳಿಸಿದೆ. ನೀವು ಮೊಬೈಲ್ ಬ್ಯಾಂಕಿಗ್ ಮೂಲಕ ಸುಲಭವಾಗಿ ಪಾವತಿಸಬಹುದಾಗಿದ್ದು, ನಿಮ್ಮ ಮೊಬೈಲ್‌ನಲ್ಲಿಯೇ ಸುಲಭವಾಗಿ ಈ ಮೆಟ್ರೋ ಬೈಕ್‌ಗಳನ್ನು ಪತ್ತೆಹಚ್ಚಬಹುದಾಗಿದೆ. ಅಲ್ಲದೇ ನೀವು ಈ ಬೈಕ್‌ ಅನ್ನು ಬಯೋಮೆಟ್ರಿಕ್ಸ್, ಬ್ಲೂಟೂತ್ ಅಥವಾ NFC ಮೂಲಕ ಪ್ರವೇಶಿಸಬಹುದಾಗಿದೆ
 
ಈ ಬೈಕ್‌ಗಳ ವಿಶೇಷವೆಂದರೆ ಇದರಲ್ಲಿ ಕೀ ಇರುವುದಿಲ್ಲ ಅದರ ಬದಲಿಗೆ ಆ ಸ್ಥಳದಲ್ಲಿ ಒಂದು ಚಿಕ್ಕ ಡಿಜಿಟಲ್ ಪರದೆ ಇರುತ್ತದೆ. ಒಮ್ಮೆ ನಿಮ್ಮ ಮೊಬೈಲ್ ಮೂಲಕ ಬೈಕ್ ಅನ್ನು ಖಚಿತಪಡಿಸಿಕೊಂಡ ಬಳಿಕ ಸಂಸ್ಥೆಯು ನಿಮ್ಮ ಮೊಬೈಲ್‌ಗೆ ಒಂದು OTP ಅನ್ನು ರವಾನಿಸುತ್ತದೆ. ಬೈಕ್‌ನ ಕೀ ಪರದೆಯ ಮೇಲೆ ನಮೂದಿಸಿದರೆ ಬೈಕ್ ಸ್ಮಾರ್ಟ್ ಆಗುತ್ತದೆ. ಹಾಗೂ ನೀವು ಪ್ರಯಾಣವನ್ನು ಮುಕ್ತಾಯಗೊಳಿಸುವಾಗ ಸಹಿತ OTP ಅನ್ನು ಕಳುಹಿಸಲಾಗುತ್ತದೆ.
 
ನೀವು ಒಮ್ಮೆ ನಿಮ್ಮ ಪ್ರಯಾಣವನ್ನು ಮುಕ್ತಾಯಗೊಳಿಸಿದರೆ, ಆ ಸ್ಥಳದಲ್ಲಿರುವ ಇನ್ನೊಬ್ಬ ಗ್ರಾಹಕರಿಗೆ ಬೈಕ್ ಇರುವಿಕೆಯನ್ನು ಸೂಚಿಸಲಾಗುತ್ತದೆ ಆ ಮೂಲಕ ಗ್ರಾಹಕರು ತಮ್ಮ ಹತ್ತಿರವಿರುವ ಬೈಕ್ ಅನ್ನು ಪತ್ತೆ ಹಚ್ಚಿ ಅದನ್ನು ಚಲಾಯಿಸಬಹುದಾಗಿದೆ. ಈ ಬೈಕ್ ಶುಲ್ಕದ ಕುರಿತು ಹೇಳುವುದಾದರೆ ಇಂಧನ ಸೇರಿದಂತೆ ಪ್ರತಿ ಕಿಮೀಗೆ 5 ರೂ. ಮತ್ತು ಪ್ರತಿ ನಿಮಿಷಕ್ಕೆ 50 ಪೈಸೆ ವಿಧಿಸುತ್ತಿದ್ದು ಇತರ ಬೈಕ್ ಬಾಡಿಗೆ ಸಂಸ್ಥೆಗಳಿಗೆ ಹೋಲಿಸಿದರೆ ಇದು ಅತೀ ಕಡಿಮೆ ಎಂದೇ ಹೇಳಬಹುದು. 
 
ಒಟ್ಟಿನಲ್ಲಿ ಪ್ರಯಾಣಿಕರನ್ನು ಗಮನದಲ್ಲಿರಿಸಿಕೊಂಡು ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೆಟ್ರೋ ಬೈಕ್ ಸಂಸ್ಥೆ ಈ ಸೇವೆಯನ್ನು ಪ್ರಾರಂಭಿಸಿದ್ದು ಈಗಾಗಲೇ ಉತ್ತಮ ಪ್ರತಿಕ್ರಿಯೆ ಸಾರ್ಮಜನಿಕರಿಂದ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಸೇವೆಯ ಮೂಲಕ ನಿಮ್ಮ ಗಮ್ಯಸ್ಥಾನವನ್ನು ಸುಲಭವಾಗಿ ತಲುಪಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments