ನವದೆಹಲಿ: ಆನ್ ಲೈನ್ ನಲ್ಲಿ ವಸ್ತುಗಳನ್ನು ಆರ್ಡರ್ ಮಾಡುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಸ್ಮಾರ್ಟ್ ಫೋನ್ ಆರ್ಡರ್ ವ್ಯಕ್ತಿಗೆ ಸಾಬೂನು ಕೈಗೆ ಬಂದಿದೆ.
ದೆಹಲಿ ಮೂಲದ ವ್ಯಕ್ತಿ ಚಿರಾಗ್ ಧವನ್ ಎಂಬವರು ಅಮೆಝೋನ್ ಆನ್ ಲೈನ್ ಶಾಪಿಂಗ್ ತಾಣದಲ್ಲಿ ಸ್ಮಾರ್ಟ್ ಫೋನ್ ಗಾಗಿ ಸೆಪ್ಟೆಂಬರ್ 7 ರಂದು ಆರ್ಡರ್ ಮಾಡಿದ್ದರು. ಸೆಪ್ಟೆಂಬರ್ 11 ರಂದು ಆರ್ಡರ್ ಅವರ ಕೈಗೆ ಬಂತು.
ಆದರೆ ತೆರೆದು ನೋಡಿದಾಗ ಶಾಕ್ ಕಾದಿತ್ತು. ಸ್ಮಾರ್ಟ್ ಫೋನ್ ಬದಲಿಗೆ ಬಾರ್ ಸೋಪ್ ಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ ಕೊಡಲಾಗಿತ್ತು. ತಕ್ಷಣ ಕಸ್ಟಮರ್ ಕೇರ್ ಗೆ ಫೋನ್ ಮಾಡಿದಾಗ ಸರಿಯಾದ ಉತ್ತರ ಸಿಗಲಿಲ್ಲ ಎಂದು ಫೇಸ್ ಬುಕ್ ನಲ್ಲಿ ಚಿರಾಗ್ ಹೇಳಿಕೊಂಡಿದ್ದಾರೆ. ಫೇಸ್ ಬುಕ್ ನಲ್ಲಿ ಪ್ರಕಟಿಸಿದ ತಕ್ಷಣ ಸಾವಿರಾರು ಮಂದಿ ಲೈಕ್ಸ್ ಕೊಟ್ಟಿದ್ದು, ತಕ್ಷಣ ಎಚ್ಚೆತ್ತುಕೊಂಡ ಅಮೆಝೋನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಚಿರಾಗ್ ಕೇಳಿದ್ದ ವಸ್ತು ನೀಡುವುದಾಗಿ ಘೋಷಿಸಿದೆ.