ನವದೆಹಲಿ: ಭಾರತದ ಭೂಶಿರ ನಾಪತ್ತೆಯಾಗಿದೆ. ಅಂದರೆ ಭಾರತದ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರವೇ ನಾಪತ್ತೆಯಾಗಿದೆ. ಇಂತಹದ್ದೊಂದು ಎಡವಟ್ಟು ಮಾಡಿರುವುದು ಆನ್ ಲೈನ್ ಮಾರಾಟಗಾರರಾದ ಅಮೆಝೋನ್.
ಜಮ್ಮು ಮತ್ತು ಕಾಶ್ಮೀರವಿಲ್ಲದ ಭಾರತದ ಭೂಪಟದ ವಾಲ್ ಸ್ಟ್ರಿಕ್ಕರ್ ನನ್ನು ಮಾರಾಟ ಮಾಡಿ ಅಮೆಝೋನ್ ಮತ್ತೊಮ್ಮೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನು ಬಿಜೆಪಿ ಪಕ್ಷ ಖಂಡಿಸಿದ್ದು ತಕ್ಷಣದಿಂದಲೇ ಉತ್ಪನ್ನವನ್ನು ಹಿಂಪಡೆಯುವಂತೆ ಆಗ್ರಹಿಸಿದೆ.
ಅಂದ ಹಾಗೆ ಅಮೆಝೋನ್ ಭಾರತದ ಬಗ್ಗೆ ಈ ರೀತಿ ಎಡವಟ್ಟು ಮಾಡುತ್ತಿರುವುದು ಇದೇ ಮೊದಲಲ್ಲ. ಹಿಂದೊಮ್ಮೆ ಭಾರತದ ತ್ರಿವರ್ಣ ಧ್ವಜದ ಬಣ್ಣದ ಕಾಲೊರಸು (ಡೋರ್ ಮ್ಯಾಟ್) ಮಾರಾಟ ಮಾಡಿ ಆಕ್ರೋಶಕ್ಕೆ ಗುರಿಯಾಗಿತ್ತು.
ನಂತರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಮೆಝೋನ್ ಸಂಸ್ಥೆ ಕ್ಷಮೆ ಕೇಳುವಂತೆ ಮಾಡಿದ್ದರು. ಇದೀಗ ಮತ್ತೊಮ್ಮೆ ಅಮೆಝೋನ್ ಅದೇ ತಪ್ಪನ್ನು ಪುನರಾವರ್ತಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ