ಮುಂಬೈ: ರತನ್ ಟಾಟಾ ಇಹಲೋಕ ತ್ಯಜಿಸಿದ ಮರುದಿನವೇ ಟಾಟಾ ಸಂಸ್ಥೆಗೆ ಹೊಸ ಒಡೆಯನ ನೇಮಕವಾಗಿದೆ. ರತನ್ ಟಾಟಾ ಮಲಸಹೋದರ ನೋಯಲ್ ಟಾಟಾರನ್ನೇ ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ.
ರತನ್ ಟಾಟಾ ಬಳಿಕ ಇವರೇ ಟಾಟಾ ಗ್ರೂಪ್ಒಡೆಯರಾಗಲಿದ್ದಾರೆ ಎಂಬ ಸುದ್ದಿ ಕಳೆದ 12 ವರ್ಷಗಳಿಂದಲೂ ಓಡಾಡುತ್ತಿತ್ತು. ರತನ್ ಟಾಟಾ ತೀರಿಕೊಂಡ ಬಳಿಕ ನೋಯಲ್ ಹೆಸರು ಮತ್ತೆ ಮುನ್ನಲೆಗೆ ಬಂದಿತ್ತು. ಇದೀಗ ಟಾಟಾ ಸಂಸ್ಥೆ ಒಮ್ಮತದಿಂದ ತನ್ನ ಒಡೆಯನ ಆಯ್ಕೆ ಮಾಡಿದೆ.
67 ವರ್ಷದ ನೋಯಲ್ ರತನ್ ಟಾಟಾ ತಂದೆಯ ಎರಡನೇ ಪತ್ನಿಯ ಮಗ. ಟಾಟಾ ಟ್ರಸ್ಟ್ ನ ಟ್ರಸ್ಟೀಗಳಲ್ಲಿ ನೋಯಲ್ ಕೂಡಾ ಒಬ್ಬರಾಗಿದ್ದರು. ರತನ್ ಟಾಟಾ ನೇರ ಸಹೋದರ ಜಿಮ್ಮಿ ಟಾಟಾ ಈಗ ಓಡಾಡಲೂ ಆಗದಷ್ಟು ಅನಾರೋಗ್ಯ ಪೀಡಿತರಾಗಿದ್ದಾರೆ. ಹೀಗಾಗಿ ನೋಯಲ್ ಗೆ ಅಧಿಕಾರ ನೀಡಲಾಗಿದೆ.
ನೋಯಲ್ ಟಾಟಾ ಸಂಸ್ಥೆಯ ಟೈಟಾನ್ ಮತ್ತು ಟಾಟಾ ಸ್ಟೀಲ್ ಚೇರ್ಮನ್ ಆಗಿ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದಾರೆ. ಟಾಟಾ ಇನ್ವೆಸ್ಟ್ ಮೆಂಟ್ ಕಾರ್ಪೋರೇಟ್ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಟಾಟಾ ಗ್ರೂಪ್ ಗೆ ಬರುವ ಮೊದಲು ನೆಸ್ಲೆ ಕಂಪನಿಯ ನೌಕರರಾಗಿದ್ದರು. ಬ್ರಿಟನ್ ಮತ್ತು ಫ್ರಾನ್ಸ್ ನಲ್ಲಿ ಉನ್ನತ ವ್ಯಾಸಂಗ ಮಾಡಿದ್ದ ನೋಯಲ್ ಅಪಾರ ಉದ್ಯಮ ಅನುಭವ ಹೊಂದಿದ್ದಾರೆ. ಮೂಲತಃ ಐರಿಶ್ ಪ್ರಜೆಯಾಗಿರುವ ಅವರು ಉದ್ಯಮಿ ಪಲ್ಲೋನ್ ಜಿ ಮಿಸ್ತ್ರಿಯವರ ಅಳಿಯ. ಇವರಿಗೆ ಮೂವರು ಮಕ್ಕಳಿದ್ದಾರೆ. ಇವರೀಗ ಟಾಟಾ ಸಂಸ್ಥೆಯ ಮುಂದಿನ ಒಡೆಯರಾಗಿದ್ದಾರೆ.