ಹಣದ ವ್ಯವಹಾರಗಳ ಬಗ್ಗೆ ತೀವ್ರ ನಿಗಾ ಇಟ್ಟಿರುವ ಆದಾಯ ತೆರಿಗೆ ಇಲಾಖೆ 11.44 ಲಕ್ಷ ಪ್ಯಾನ್ ಕಾರ್ಡ್`ಗಳನ್ನ ಬ್ಲಾಕ್ ಮಾಡಿದೆ. ನಕಲಿ ಪ್ಯಾನ್ ಕಾರ್ಡ್`ಗಳನ್ನ ಪತ್ತೆ ಹಚ್ಚಲು ಮತ್ತು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್`ಗಳನ್ನ ಹೊಂದಿರುವವರನ್ನ ನಿರ್ಬಂಧಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದರ ಜೊತೆಗೆ ತಪ್ಪು ದಾಖಲೆ ನೀಡಿ ಪ್ಯಾನ್ ಕಾರ್ಡ್ ಪಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕಿರುವ ಇಲಾಖೆ ಪ್ಯಾನ್ ಕಾರ್ಡ್ ಕರ್ಮಕಾಂಡಕ್ಕೆ ತೆರೆ ಎಳೆಯಲು ಈ ನಿರ್ಧಾರ ಕೈಗೊಂಡಿದೆ. ಐಟಿ ಇಲಾಖೆಯ ಈ ಆದೇಶದ ಬಳಿಕ ನಿಮ್ಮ ಪ್ಯಾನ್ ಕಾರ್ಡ್ ಸಹ ಬ್ಲಾಕ್ ಆಗಿದೆಯಾ ಎಂಬುದನ್ನ ಈ ರೀತಿ ಪರೀಕ್ಷಿಸಬಹುದು.
1. ಆದಾಯ ತೆರಿಗೆ ಇ ಫೈಲಿಂಗ್ ವೆಬ್ ಸೈಟ್ ಓಪನ್ ಮಾಡಿ
2. ಹೋಮ್ ಪೇಜ್``ನಲ್ಲಿ ಮೇಲೆ ಕ್ಲಿಕ್ ಮಾಡಿ
3. ಪೇಜ್ ಓಪನ್ ಆದ ಬಳಿಕ ಸರ್ ನೇಮ್, ಫಸ್ಟ್ ನೇಮ್, ಪ್ಯಾನ್ ಸ್ಟೇಟಸ್, ಲಿಂಗ, ಹುಟ್ಟಿದ ದಿನಾಂಕ, ಪ್ಯಾನ್ ಕಾರ್ಡ್ ಜೊತೆ 4. ನೋಂದಾಯಿಸಿರುವ ಮೊಬೈಲ್ ನಂಬರ್ ಎಂಟ್ರಿ ಮಾಡಿ.
5. ನಿಮಗೆ ಒನ್ ಟೈಮ್ ಪಾಸ್ ವರ್ಡ್ ಬರುತ್ತದೆ. ವಾಲಿಡೇಟ್ ಮಾಡಲು ಕೇಳಲಾಗುತ್ತದೆ.
6. ನಿಮ್ಮ ಪ್ಯಾನ್ ಕಾರ್ಡ್ ವಾಲಿಡ್ ಆಗಿದ್ದರೆ “Active” ಎಂದು ತೋರಿಸುತ್ತದೆ.
ಒಂದೊಮ್ಮೆ ನೀವು ನೀಡಿರುವ ದಾಖಲೆಗಳಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್`ಗಳಿದ್ದರೆ.There are multiple records for this query. Please provide additional information ಎಂದು ತೋರಿಸುತ್ತದೆ. ಹೆಚ್ಚುವರಿ ಮಾಹಿತಿ ಕೇಳುತ್ತದೆ. ಹೊಸ ಪೇಜ್`ಗೆ ಡೈರೆಕ್ಟ್ ಮಾಡಿ ನಿಮ್ಮ ಪ್ಯಾನ್ ಕಾರ್ಡ್ ವ್ಯಾಲಿಡಿಟಿ ನೋಟಿಫೈ ಮಾಡಲು ಕೇಳುತ್ತೆ.
ಇದೀಗ, ಪ್ಯಾನ್ ಕಾರ್ಡ್`ಗೆ ಆಧಾರ್ ಲಿಂಕ್ ಕಡ್ಡಾಯವಾಗಿದ್ದು, ಲಿಂಕ್ ಮಾಡದಿದ್ದರೆ ಡಿಸೆಂಬರ್`ನಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಅನೂರ್ಜಿತಗೊಳ್ಳಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ