ಹೌದು. ಕೆಲವೊಮ್ಮೆ ಎಟಿಎಂ ನಿಂದ ಹಣ ತೆಗೆಯುವಾಗ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ಎಸ್.ಬಿ.ಐ. ಗ್ರಾಹಕರು ಚಿಂತಿಸುವ ಅಗತ್ಯವಿಲ್ಲ. ತಕ್ಷಣ ನಿಂತಲ್ಲಿಯೇ ಆನ್ ಲೈನ್ ನಲ್ಲಿ ದೂರು ನೀಡುವ ವ್ಯವಸ್ಥೆಯನ್ನು ಎಸ್.ಬಿ.ಐ. ಮಾಡಿದೆ.
ಗ್ರಾಹಕರು ಎಸ್.ಬಿ.ಐ. ವೆಬ್‍ಸೈಟ್‍ಗೆ ಹೋಗಿ ಆನ್ ಲೈನ್ ನಲ್ಲಿ ದೂರು ನೀಡುವುದು ಹೇಗೆ?
ಗ್ರಾಹಕರು ಎಸ್.ಬಿ.ಐ. ವೆಬ್‍ಸೈಟ್‍ಗೆ ಹೋಗಿ ಅಲ್ಲಿ ಕಾಣಿಸುವ ಸಿಎಂಎಸ್ ಪೋರ್ಟಲ್ ನ ನಿಗದಿತ ಜಾಗದಲ್ಲಿ ಖಾತೆ ಸಂಖ್ಯೆ, ಖಾತೆಯ ವಿಧ, ಬ್ರ್ಯಾಂಚ್ ಕೋಡ್, ಮೊಬೈಲ್ ನಂಬರ್, ಇಮೇಲ್ ಐಡಿ, ಯಾವ ರೀತಿಯ ದೂರು ಇತ್ಯಾದಿ ವಿವರಗಳನ್ನು ನಮೂದಿಸಿ ಸಬ್ಮೀಟ್ ಮಾಡಬೇಕು.
ದೂರು ಸಬ್ಮೀಟ್ ಆದ ನಂತರ ದೂರಿನ ಸಂಖ್ಯೆ ಹಾಗೂ ಸ್ಟೇಟಸ್ ಮಾಹಿತಿಯು ನೀವು ನೀಡಿದ ಇಮೇಲ್ ಐಡಿ ಹಾಗೂ ಮೊಬೈಲ್‍ಗೆ ಬರುತ್ತದೆ. 7 ದಿನಗಳ ಒಳಗೆ ದೂರಿನ ವಿಲೇವಾರಿ ಆಗಲಿದೆ. ಒಂದು ವೇಳೆ ದೂರು ಇತ್ಯರ್ಥವಾಗದಿದ್ದಲ್ಲಿ ಬ್ಯಾಂಕ್ ಒಂಬುಡ್ಸ್‍ಮನ್‍ಗೆ ಆನ್ ಲೈನ್ ನಲ್ಲೇ ದೂರು ಸಲ್ಲಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.