ಬೆಂಗಳೂರು: ಇದುವರೆಗೆ ಎಟಿಎಂ ಮುಖಾಂತರ ಇನ್ನೊಂದು ಖಾತೆಗೆ ಹಣ ಜಮಾವಣೆ ಮಾಡಲು ಡೆಬಿಟ್ ಕಾರ್ಡ್ ಅಗತ್ಯವಿತ್ತು. ಆದರೆ ಇನ್ನು ಇವೆರಡೂ ಇಲ್ಲದೆಯೂ ಹಣ ಜಮೆ ಮಾಡಬಹುದಾಗಿದೆ. ಹೇಗೆ ಇಲ್ಲಿದೆ ವಿವರ.
ಆರ್ ಬಿಐ ಇತ್ತೀಚೆಗೆ ಯುಪಿಐ ಐಸಿಡಿ ಫೀಚರ್ ನ್ನು ಪರಿಚಯಿಸಿದೆ. ಈ ಫೀಚರ್ ನಲ್ಲಿ ನೀವು ಕೇವಲ ಯುಪಿಐ ಐಡಿ ಬಳಸಿ ಹಣ ಜಮೆ ಮಾಡಬಹುದಾಗಿದೆ. ಎಟಿಎಂ ಸೆಂಟರ್ ಗೆ ಹೋಗಿ ಯುಪಿಐ ಸಂಖ್ಯೆ ಬಳಸಿ ಹಣ ಕಳುಹಿಸುವುದು ಹೇಗೆ ಎಂಬ ಹಂತ ಹಂತವಾದ ವಿವರ ಇಲ್ಲಿದೆ ನೋಡಿ.
ಯುಪಿಐ ಐಸಿಡಿ ಫೀಚರ್ ಬಳಸುವುದು ಹೇಗೆ
ಸದ್ಯಕ್ಕೆ ಎಲ್ಲಾ ಎಟಿಎಂಗಳಲ್ಲಿ ಈ ಫೀಚರ್ ಇರುವುದಿಲ್ಲ. ಕ್ರಮೇಣ ಎಲ್ಲಾ ಎಟಿಎಂಗಳಲ್ಲೂ ಈ ಫೀಚರ್ ಬರಬಹುದು. ಇದೀಗ ಕ್ಯಾಷ್ ರಿಸೈಕ್ಲಿಂಗ್ ಮೆಷಿನ್ ಗಳಿರುವ ಕೆಲವು ಎಟಿಎಂಗಳಲ್ಲಿ ಮಾತ್ರ ಈ ಸೌಲಭ್ಯವಿದೆ.
ಇಂತಹ ಎಟಿಎಂಗಳಿಗೆ ಹೋಗಿ ಮೊದಲು ಕ್ಯಾಷ್ ಡೆಪಾಸಿಟ್ ಬಟನ್ ಕ್ಲಿಕ್ ಮಾಡಿ
ನಿಮ್ಮ ಯುಪಿಐ ಐಡಿಗೆ ಹೊಂದಿಕೊಂಡಿರುವ ಮೊಬೈಲ್ ಸಂಖ್ಯೆ ಅಥವಾ ಬ್ಯಾಂಕ್ ಐಎಫ್ ಸಿ ಕೋಡ್ ನ್ನು ನಮೂದಿಸಿ.
ಬಳಿಕ ಹಣ ಇಡುವ ಜಾಗದಲ್ಲಿ ನೋಟುಗಳನ್ನು ಇಡಿ. ಈಗ ಸುಲಭವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಆ ಹಣ ಜಮೆ ಆಗುತ್ತದೆ.
ಕಾಲ ಕ್ರಮೇಣ ಹಣ ಜಮೆ ಮಾಡುವ ಉದ್ದೇಶಕ್ಕೆ ಎಟಿಎಂ ಕಾರ್ಡ್ ಬಳಕೆ ಮಾಡಲು ಈ ವಿಧಾನವನ್ನು ಆರ್ ಬಿಐ ಪರಿಚಯಿಸಿದೆ. ಮುಂದಿನ ದಿನಗಳಲ್ಲಿ ಇದು ಎಲ್ಲಾ ಎಟಿಎಂಗಳಲ್ಲಿ ಲಭ್ಯವಿರಲಿದೆ.