ಒಂದು ಕಾಲದಲ್ಲಿ ಭಾರತದಲ್ಲಿ ಕಾರು ಎಂದರೆ ಅಂಬಾಸಿಡರ್... ಕೆಲವು ವರ್ಷಗಳ ತನಕ ಭಾರತೀಯ ಕಾರು ಎಂದು ಗುರುತಿಸಿಕೊಂಡಿತ್ತು. ಹಿಂದೂಸ್ತಾನ್ ಮೋಟಾರ್ಸ್‍ನ ಈ ಬ್ರಾಂಡ್ ಈಗ ಯೋರೋಪಿಯನ್ ಕಂಪೆನಿ ತೆಕ್ಕೆಗೆ ಹೋಗುತ್ತಿದೆ.
ಯೂರೋಪಿಯನ್ ಆಟೋಮೊಬೈಲ್ ದಿಗ್ಗಜ ಕಂಪೆನಿ ಪ್ಯೂಗೋಟ್ ಎಸ್ಎ ಇದನ್ನ್ನು ಖರೀದಸಿದೆ. ಇದಕ್ಕೆ ಸಂಬಂಧಿಸಿದ ಒಪ್ಪಂದ ಈಗಾಗಲೆ ಮಾಡಿಕೊಳ್ಳಲಾಗಿದೆ. ಅಂಬಾಸಿಡರ್ ಟ್ರೇಡ್ ಮಾರ್ಕ್ ಸಹ ಇತರೆ ಹಕ್ಕುಗಳನ್ನು ರೂ.80 ಕೋಟಿಗೆ ಖರೀದಿಸಿದ್ದಾಗಿ ಸುದ್ದಿ ಇದೆ.
ತಮಿಳುನಾಡಿನಲ್ಲಿ ಪ್ಯೂಗೋಟ್ ಘಟಕವನ್ನು ಆರಂಭಿಸಲಿದ್ದಾರೆ. ಆರಂಭದಲ್ಲಿ ವರ್ಷಕ್ಕೆ 1 ಲಕ್ಷ ಕಾರುಗಳನ್ನು ತಯಾರಿಸಬೇಕೆಂದು ಗುರಿಯಾಗಿಟ್ಟುಕೊಳ್ಳಲಾಗಿದೆ. ಭಾರತದಲ್ಲಿ ಅಂಬಾಸಿಡರ್ ಮಾರಾಟ ಕಡಿಮೆಯಾದ ಕಾರಣ 2014ರಲ್ಲಿ ತಯಾರಿ ನಿಲ್ಲಿಸಲಾಗಿತ್ತು. 1980ರಲ್ಲಿ 24,000 ಕಾರುಗಳನ್ನು ಮಾರಾಟ ಮಾಡಿದ ಅಂಬಾಸಿಡರ್ 2000 ವೇಳೆಗೆ 6,000ಕ್ಕೆ ಇಳಿದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.