ನವದೆಹಲಿ : ಸಚಿವ ರಾಜನಾಥ್ ಸಿಂಗ್ ರಾಜೀನಾಮೆ ನೀಡುತ್ತಾರೆಂಬ ವದಂತಿ ಹಿನ್ನಲೆಯಲ್ಲಿ ಅವರಿಗೆ 8 ಸಂಪುಟ ಸಮಿತಿಯಲ್ಲಿ 6 ಸ್ಥಾನ ನೀಡಲಾಗಿದೆ.
ರಾಜನಾಥ್ ಸಿಂಗ್ ಈ ಮೊದಲು 8 ಸಂಪುಟ ಸಮಿತಿಯಲ್ಲಿ 2 ಸಮಿತಿಯಲ್ಲಿ ಸ್ಥಾನ ಮಾತ್ರ ನೀಡಲಾಗಿತ್ತು. ಆರ್ಥಿಕ ವ್ಯವಹಾರ, ಭದ್ರತಾ ಸಂಪುಟ ಸಮಿತಿಯಲ್ಲಿ ಸ್ಥಾನ ನೀಡಲಾಗಿತ್ತು.
ಆದರೆ ಇದರಿಂದ ಬೇಸರಗೊಂಡ ರಾಜನಾಥ್ ಸಿಂಗ್ ರಾಜೀನಾಮೆ ನೀಡ್ತಾರೆಂಬ ವದಂತಿ ಹಬ್ಬಿದ ಹಿನ್ನಲೆಯಲ್ಲಿ ಹೀಗಾಗಿ ಸಂಸದೀಯ ವ್ಯವಹಾರ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ, ರಾಜಕೀಯ ವ್ಯವಹಾರ, ಹೂಡಿಕೆ ಮತ್ತು ಬೆಳವಣಿಗೆ ಸಮಿತಿ ಸೇರಿ ಹೆಚ್ಚುವರಿಯಾಗಿ 4 ಸಂಪುಟ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.