ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಈಗ 700ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಸಾರ್ವಜನಿಕರಿಗಾಗಿ ಉಚಿತ ವೈ-ಫೈ ಸೇವೆಯನ್ನು ಕಲ್ಪಿಸುತ್ತಿದೆ. ಗೂಗಲ್ ಸಹಯೋಗದಲ್ಲಿ ಈ ಸೇವೆಯನ್ನು ನೀಡಲಾಗುತ್ತಿದೆ. ರೈಲ್ವೆಯ ಅಧೀನ ಸಂಸ್ಥೆಯಾಗಿರುವ, ರೈಲ್‌ಟೆಲ್ ಇದರ ಕುರಿತು ಟ್ವೀಟ್ ಮಾಡಿದೆ.
ಇನ್ನು ಈ ವೈ-ಫೈ ಸೇವೆಯಲ್ಲಿ ಗ್ರಾಹಕರು 30 ನಿಮಿಷಗಳ ಕಾಲ ಉಚಿತವಾಗಿ ಇಂಟರ್‌ನೆಟ್ ಸೌಲಭ್ಯವನ್ನು ಪಡೆಯಬಹುದಂತೆ. ಈ ಉಚಿತ ವೈ-ಫೈ ವ್ಯವಸ್ಥೆಯೂ ನಗರದ 407 ರೈಲ್ವೆ ನಿಲ್ದಾಣಗಳಲ್ಲಿ ಮತ್ತು ಗ್ರಾಮೀಣ ಭಾಗದ 298 ರೈಲ್ವೆ ನಿಲ್ದಾಣಗಳಲ್ಲಿ ಲಭ್ಯ. ಕರ್ನಾಟಕಯೂ ಸೇರಿ 27 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೇವೆ ಸಿಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ