Webdunia - Bharat's app for daily news and videos

Install App

ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಗುಡ್‌ನ್ಯೂಸ್‌: ಸ್ಟೇಟಸ್‌ ವಿಡಿಯೊ ಅವಧಿ 2 ನಿಮಿಷಕ್ಕೆ ಏರಿಕೆಗೆ ಸಿದ್ಧತೆ

Sampriya
ಬುಧವಾರ, 19 ಮಾರ್ಚ್ 2025 (18:32 IST)
Photo Courtesy X
ಬೆಂಗಳೂರು: ವಾಟ್ಸ್‌ಆ್ಯಪ್‌ ಬಳಸುವ ನೂರಾರು ಕೋಟಿ ಗ್ರಾಹಕರಿಗೆ ಗುಡ್‌ನ್ಯೂಸ್‌. ಜನಪ್ರಿಯ ಮೆಟಾ ಒಡೆತನದ ವಾಟ್ಸ್‌ಆ್ಯಪ್‌ಸದ್ಯದಲ್ಲೇ ಸ್ಟೇಟಸ್‌ ಅವಧಿಯನ್ನ ಎರಡು ನಿಮಿಷಕ್ಕೆ ಏರಿಕೆ ಮಾಡಲಿದೆ.

ಇಂದು ವಿಶ್ವದಾದ್ಯಂತ ಕೋಟ್ಯಂತರ ಜನರು ಬಳಸೋ ಮೆಸೇಜಿಂಗ್​ ಆ್ಯಪ್​ ವಾಟ್ಸ್‌ಆ್ಯಪ್‌ ಜನಪ್ರಿಯ ಅಪ್ಲಿಕೇಷನ್ ಕೂಡ ಹೌದು. ದಿನದಿಂದ ದಿನಕ್ಕೆ ಈ ಅಪ್ಲಿಕೇಷನ್‌ ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ಮೆಟಾ ಕಂಪನಿಯೂ ಅಪ್ಲಿಕೇಷನ್‌ನಲ್ಲೂ ಅಪ್‌ಡೇಟ್‌ ಮಾಡಿ ಗ್ರಾಹಕರನ್ನು ತೃಪ್ತಿಪಡಿಸುವ ಕೆಲಸ ಮಾಡುತ್ತಿದೆ.

ಅಸಂಖ್ಯಾ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ವಾಟ್ಸ್‌ಆ್ಯಪ್‌​​ ಸ್ಟೇಟಸ್‌ನಲ್ಲಿ ಪ್ರಮುಖ ಬದಲಾವಣೆ ತರಲಿದೆ. ಅದರಂತೆ ಸ್ಟೇಟಸ್​ ವಿಡಿಯೋ ಮಿತಿಯನ್ನು ಏರಿಕೆ ಮಾಡಲು ಹೊರಟಿದೆ. ಈ ಮೊದಲು 30 ಸೆಕೆಂಡ್‌ಗಳಿಗೆ ಸೀಮಿತವಾಗಿದ್ದ ವಿಡಿಯೊವನ್ನು ಕೆಲ ತಿಂಗಳ ಹಿಂದೆ 1 ನಿಮಿಷಕ್ಕೆ ಹೆಚ್ಚಿಸಿದೆ. ಅದಕ್ಕೆ ಉತ್ತಮ ಪ್ರತಿಕ್ರಿಯೆವಾಗಿದೆ.

ಇದರಿಂದ ಪ್ರೇರಣೆಗೊಂಡಿರುವ ಕಂಪೆನಿಯು ಎರಡು ನಿಮಿಷಕ್ಕೆ ವಿಸ್ತರಿಸಲು ನಿರ್ಧರಿಸಿದೆ. ಇದು ಸದ್ಯದಲ್ಲೇ ಅನುಷ್ಠಾನವಾಗಲಿದ್ದು, ಗ್ರಾಹಕರು ಆಗ ದೀರ್ಘಾವಧಿಯ ವಿಡಿಯೋ ಹಂಚಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ಆ್ಯಪ್‌​ ಅಪ್ಡೇಟ್​ ಮಾಡಿಕೊಂಡು ಅದನ್ನು ಬಳಸಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru Rains: ಪಾಕಿಸ್ತಾನ ಹೇಳಿದ್ದು ನಿಜವಾಯ್ತು ಬೆಂಗಳೂರಲ್ಲಿ ಬಂದರು ಮಾಡಬಹುದು

ಗಾಜಾದ ಮೇಲೆ ಮುಗಿಯದ ಇಸ್ರೇಲ್‌ ಟಾರ್ಗೆಟ್‌, ದಾಳಿಗೆ 64 ಪ್ಯಾಲೆಸ್ತೀನಿಯರು ಸಾವು

Operation Sindoor ಬಗ್ಗೆ ಅವಹೇಳನಕಾರಿ ಪೋಸ್ಟ್‌: ಹರಿಯಾಣ ಪ್ರೊಪ್ರೆಸರ್ ಅರೆಸ್ಟ್‌

ಪಾಕಿಸ್ತಾನಕ್ಕೆ ಬೇಹುಗಾರಿಕೆ: ನಮ್ಮವರೇ ಹೀಗೇ ಮಾಡಿದ್ರೆ ಏನ್‌ ಮಾಡೋದು

ಪಾಕ್‌ನಲ್ಲಿ ತೀವ್ರವಾದ ಆಹಾರ ಅಭದ್ರತೆ: 11ಮಿಲಿಯನ್ ಜನರ ಮೇಲೆ ಪರಿಣಾಮ ಸಾಧ್ಯತೆ

ಮುಂದಿನ ಸುದ್ದಿ
Show comments