ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ರೆಪೋ ದರವನ್ನು ಸತತ ನಾಲ್ಕನೇ ಬಾರಿಗೆ ಬದಲಾಯಿಸದೆ ಇರಲು ತೀರ್ಮಾನಿಸಿದೆ. ಸದ್ಯ ರೆಪೋ ದರ 6.5% ರಷ್ಟು ಇದ್ದು, ಇದನ್ನು ಬದಲಿಸದೆ ಇರಲು ನಿರ್ಧರಿಸಿದೆ. ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ರೆಪೋ ದರವು RBI ಇತರ ಬ್ಯಾಂಕ್‌ಗಳಿಗೆ ಸಾಲ ನೀಡುವ ಬಡ್ಡಿ ದರವಾಗಿದೆ. ಇನ್ನು, "ಭಾರತವು ವಿಶ್ವದ ಹೊಸ ಬೆಳವಣಿಗೆಯ ಎಂಜಿನ್ ಆಗಲು ಸಜ್ಜಾಗಿದೆ", ನಾವು ಹಣದುಬ್ಬರವನ್ನು ಸುಸ್ಥಿರ ಬೆಳವಣಿಗೆಗೆ ಪ್ರಮುಖ ಅಪಾಯವೆಂದು ಗುರುತಿಸಿದ್ದೇವೆ ಎಂದೂ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.