ಬೆಂಗಳೂರು : ಬೈಕ್ ಸವಾರಿಗೊಂದು ಸಿಹಿಸುದ್ದಿ. ಇನ್ನುಮುಂದೆ ಹೆಲ್ಮೆಟ್ ಧರಿಸಿ ಸೆಕೆಯಿಂದ ಕಿರಿಕಿರಿ ಅನುಭವಿಸುವ ಅಗತ್ಯವಿಲ್ಲ. ಯಾಕೆಂದರೆ ಅಮೆರಿಕಾದ ಹೆಲ್ಮೆಟ್ ತಯಾರಿಕ ಕಂಪನಿಯೊಂದು ಎಸಿ ಹೆಲ್ಮೆಟ್ ಅನ್ನು ಸಿದ್ಧಪಡಿಸಿದೆ.
ಹೌದು. ಸುರಕ್ಷಿತ ಪ್ರಯಾಣಕ್ಕೆ ಹೆಲ್ಮೆಟ್ ಕಡ್ಡಾಯ ಎಂದು ತಿಳಿದರೂ ಕೂಡ ಕೆಲವರು ಹೆಲ್ಮೆಟ್ ಧರಿಸಿದರೆ ಕಿರಿಕಿರಿಯಾಗುತ್ತದೆ ಎಂಬ ಕಾರಣಕ್ಕೆ ಹೆಲ್ಮೆಟ್ ಧರಿಸದೇ ಪ್ರಯಾಣ ಬೆಳೆಸಿ ಅಪಘಾತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಆದಕಾರಣ ಇದೀಗ ಅಮೆರಿಕಾದ ಹೆಲ್ಮೆಟ್ ತಯಾರಿಕ ಕಂಪನಿ Feher helmet ಎಸಿ ಹೆಲ್ಮೆಟ್ ನ್ನು ಸಿದ್ಧಪಡಿಸಿದೆ. ಇದೀಗ ಮಾರುಕಟ್ಟೆಗೆ ಈ ಎಸಿ ಹೆಲ್ಮೆಟ್ ಕಾಲಿಟ್ಟಿದೆ. ಇದರಿಂದ ಬೇಸಿಗೆಯಲ್ಲೂ ಹೆಲ್ಮೆಟ್ ಧರಿಸಿ ಆರಾಮವಾಗಿ ಬೈಕ್ ನಲ್ಲಿ ಪ್ರಯಾಣ ಬೆಳೆಸಬಹುದಾಗಿದೆ.
ಹೊರಗೆ ಹೆಚ್ಚು ಉಷ್ಣತೆ ಇರುವಾಗ ಹೆಲ್ಮೆಟ್ ನಿಮ್ಮ ತಲೆ ಹಾಗೂ ಮುಖದ ಉಷ್ಣತೆಯನ್ನು ಶೇಕಡಾ 10-15 ರಷ್ಟು ಕಡಿಮೆ ಮಾಡುತ್ತದೆಯಂತೆ. ಈ ಎಸಿ ಹೆಲ್ಮೆಟ್ ಗೆ ಯಾವುದೇ ಬ್ಯಾಟರಿ ಅಳವಡಿಸಿಲ್ಲ. ಬದಲಾಗಿ ಪವರ್ ಕೋಡ್ ಅಳವಡಿಸಲಾಗಿದೆ. ಈ Feher ACH-1 ಹೆಲ್ಮೆಟ್ ಬೆಲೆ 599 ಡಾಲರ್ ( ಸುಮಾರು 42,240 ರೂ.) ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.