ಬೆಂಗಳೂರು : ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರಕ್ಕೆ ಇದೀಗ ಸೆನ್ಸಾರ್ ಮಂಡಳಿಯಿಂದ ಸಂಕಷ್ಟ ಎದುರಾಗಿದೆ.
‘ದಿ ವಿಲನ್’ ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಅದಕ್ಕಾಗಿ ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೇಟ್ ಪಡೆದುಕೊಳ್ಳಲು ಮುಂದಾಗಿದೆ. ಆದರೆ ಸಿನಿಮಾ ವೀಕ್ಷಿಸಿದ ಸೆನ್ಸಾರ್ ಮಂಡಳಿ `ದಿ ವಿಲನ್’ ಸಿನಿಮಾ ‘ಎ’ ಸರ್ಟಿಫಿಕೇಟ್ ಕೊಡಲು ಮುಂದಾಗಿದೆ.
ಮಲ್ಟಿಪ್ಲೆಕ್ಸ್ ನಲ್ಲಿ `ಎ’ ಸರ್ಟಿಫಿಕೇಟ್ ನೀಡುವುದರಿಂದ ಹೆಚ್ಚಿನ ಎಫೆಕ್ಟ್ ಆಗುವುದರಿಂದ ಚಿತ್ರದ ನಿರ್ದೇಶಕ ಪ್ರೇಮ್ ಸೆನ್ಸಾರ್ ಮಂಡಳಿಯವರ ಮೆಲೆ ಬೇಸರ ವ್ಯಕ್ತಪಡಿಸಿದ್ದಾರೆ. ನಂತರ ‘ಯು’ ಸರ್ಟಿಫಿಕೇಟ್ ನೀಡಲು ಮುಂದಾದ ಸೆನ್ಸಾರ್ ಮಂಡಳಿ ಸಿನಿಮಾದಲ್ಲಿಯ 10 ನಿಮಿಷದ ದೃಶ್ಯವೊಂದನ್ನು ಕತ್ತರಿಸುವಂತೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.