Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಫ್ರೀಚಾರ್ಜ್‍ ಮೂಲಕ ಬಂಡವಾಳ ಹೂಡಿಕೆ

ಫ್ರೀಚಾರ್ಜ್‍ ಮೂಲಕ ಬಂಡವಾಳ ಹೂಡಿಕೆ
New Delhi , ಗುರುವಾರ, 19 ಜನವರಿ 2017 (10:24 IST)
ಯಾವುದೇ ರೀತಿಯ ಪತ್ರಗಳನ್ನು ಭರ್ತಿ ಮಾಡದೆ, ಯಾವುದೇ ರೀತಿಯ ಶುಲ್ಕವನ್ನು ಭರಿಸದೆ ಮ್ಯೂಚುವಲ್ಸ್ ನಿಧಿಯಲ್ಲಿ ಬಂಡವಾಳ ಹೂಡಲು ಫ್ರೀಚಾರ್ಜ್ ಅವಕಾಶ ಕಲ್ಪಿಸುತ್ತದೆ. ಈ ಸಂಬಂಧ ರಿಲಯನ್ಸ್ ಮ್ಯೂಚುವಲ್ ಫಂಡ್ಸ್ ಜತೆ ಒಪ್ಪಂದ ಮಾಡಿಕೊಂಡಿದೆ.
 
ಒಂದೇ ಒಂದು ಕ್ಲಿಕ್ ಮೂಲಕ ಮ್ಯೂಚುವಲ್ ಫಂಡ್ಸ್‌ನಲ್ಲಿ ಬಂಡವಾಳ ಹೂಡಲು ಸಾಧ್ಯವಾಗಲಿದೆ. ಇದಕ್ಕಾಗಿ ಪಾನ್ ಅಥವಾ ಆಧಾರ್ ವಿವರಗಳನ್ನು ಸಲ್ಲಿಸಿದರೆ ಸಾಕು. ಕೈವೈಸಿ ವಿವರಗಳುಳ್ಳ ಗ್ರಾಹಕರು ಪಾನ್ ನಂಬರ್, ಬ್ಯಾಂಕ್ ಖಾತೆ ಸಂಖ್ಯೆ, ಇನ್ನೊಂದಿಷ್ಟು ವೈಯಕ್ತಿಕ ವಿವರಗಳನ್ನು ಕೊಡುವ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. 
 
ಕೈವಿಸಿ ವಿವರಗಳು ಇಲ್ಲದವರು ಆಧಾರ್ ನಂಬರನ್ನು ಅವರ ಫೋನ್ ನಂಬರಿಗೆ ಜೋಡಿಸುವ ಮೂಲಕ ಕೈವಿಸಿ ಪೂರ್ಣಗೊಳಿಸಬಹುದುದೆಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಒಟ್ಟಾರೆ ಮೊಬೈಲ್ ಆಪ್‌ಗಳ ಬಳಕೆ ಹೆಚ್ಚಾಗುತ್ತಿರುವ ಕಾರಣ, ಈಗ ಎಲ್ಲವೂ ಸ್ಮಾರ್ಟ್‌ಫೋನ್‌ನಲ್ಲೇ ಎಂಬಂತಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಬಾ ದಂಗಲ್: ಒಲಿಂಪಿಕ್ ವಿಜೇತನಿಗೆ ಮಣ್ಣು ಮುಕ್ಕಿಸಿದ ರಾಮದೇವ್