Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೇಶಿಯ ಮಾರುಕಟ್ಟೆಯಲ್ಲಿ ಎನರ್ಜೈಸರ್ ಅಬ್ಬರ...!

ದೇಶಿಯ ಮಾರುಕಟ್ಟೆಯಲ್ಲಿ ಎನರ್ಜೈಸರ್ ಅಬ್ಬರ...!

ಗುರುಮೂರ್ತಿ

ಬೆಂಗಳೂರು , ಗುರುವಾರ, 1 ಮಾರ್ಚ್ 2018 (18:31 IST)
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ತಂತ್ರಜ್ಞಾನಗಳನ್ನು ಒಳಗೊಂಡ ಮೊಬೈಲ್‌ಗಳು ಬಿಡುಗಡೆಯಾಗುತ್ತಿರುವ ಬೆನ್ನಲ್ಲೇ ಬ್ಯಾಟರಿ ತಯಾರಿಕೆಯಲ್ಲಿ ಹೆಸರು ಮಾಡಿರುವ ಅಮೆರಿಕಾ ಮೂಲದ ಎನರ್ಜೈಸರ್ ಕಂಪನಿ ತನ್ನ ನೂತನ ಮೊಬೈಲ್ ಅನ್ನು ಸಪ್ಟೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ.
ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪೈಪೋಟಿಗಳ ಮಧ್ಯೆ ತನ್ನ ನೂತನ ಮೊಬೈಲ್‌ ಆದ ಎನರ್ಜೈಸರ್ ಪವರ್ ಮ್ಯಾಕ್ಸ್ P16K ಪ್ರೋ ಅನ್ನು ಕಂಪನಿ ಬಿಡುಗಡೆ ಮಾಡಲಿದ್ದು ಇದರಲ್ಲಿರುವ ಹಲವಾರು ವೈಶಿಷ್ಟ್ಯಗಳಿಂದ ಈ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ದು ಮಾಡುಬಹುದು ಎಂದು ಹೇಳಲಾಗುತ್ತಿದೆ.
webdunia
ಎನರ್ಜೈಸರ್ ಮೊಬೈಲ್‌ನಲ್ಲಿ 16000 mAh ಬ್ಯಾಟರಿಯನ್ನು ಅಳವಡಿಸಿದ್ದು, ಉಳಿದ ಸ್ಮಾರ್ಟ್‌ಫೋನ್‌ಗಳಿಗಿಂತ 5 ಪಟ್ಟು ಹೆಚ್ಚು ಬ್ಯಾಟರಿ ಶಕ್ತಿಯನ್ನು ಹೊಂದಿದೆ ಎಂದು ಹೇಳಬಹುದು. ಅಷ್ಟೇ ಅಲ್ಲ ಈ ಸ್ಮಾರ್ಟ್‌ಫೋನ್‌ ಹೊರವಿನ್ಯಾಸವು ಆಕರ್ಷಕವಾಗಿದ್ದು ಮೊದಲ ನೋಟದಲ್ಲೇ ಇದು ಗ್ರಾಹಕರನ್ನು ಸೆರೆಹಿಡಿಯುವ ಶಕ್ತಿಯನ್ನು ಹೊಂದಿದೆ ಎಂದು ಹೇಳಬಹುದು. ಇದು ಕ್ಯಾಟ್ S60 ನ ಬಿಪ್ ಅಪ್ ಆವೃತ್ತಿಯಂತೆ ಕಂಡುಬರುತ್ತದೆ ಮತ್ತು ಇತರ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದ್ದು ಮುಂಬಾಗದ ನೋಟ ಹಾಗೂ ಸುತ್ತಲಿನ ವಿನ್ಯಾಸ ಅಚ್ಚುಕಟ್ಟಾಗಿ ರಚಿಸಲಾಗಿದೆ.
webdunia
ಈ ಸ್ಮಾರ್ಟ್‌ಫೋನ್‌ ಕುರಿತು ಹೇಳುವುದಾದರೆ ಎನರ್ಜೈಸರ್ ಪವರ್ ಮ್ಯಾಕ್ಸ್ P16K ಪ್ರೋ 5.9 ಇಂಚಿನ 2160 x 1080px ಐಪಿಎಸ್ ಎಲ್‌ಸಿಡಿ ಪರದೆಯನ್ನು ಹೊಂದಿದ್ದು, 6GB RAM ಮತ್ತು 128GB ಆಂತರಿಕ ಸಂಗ್ರಹಣೆಯ ಜೊತೆಗೆ ಮೀಡಿಯಾಟೆಕ್‌ MT6763T ಹೆಲಿಯೋ P23 ಚಿಪ್‌ಸೆಟ್ ಅನ್ನು ಹೊಂದಿದೆ. ಈ ಫೋನ್ ಆಂಡ್ರಾಯ್ಡ್ 8 OS ನ ಮೂಲಕ ಕಾರ್ಯನಿರ್ವಹಿಸುತ್ತದೆ, ಅಷ್ಟೇ ಅಲ್ಲದೇ ಈ ಸ್ಮಾರ್ಟ್‌ಫೋನ್ 3.5 ಎಂಎಂ ಹೆಡ್‌ಫೋನ್ ಜಾಕ್ ಅನ್ನು ಹೊಂದಿದ್ದು, ಎರಡು ಕೆಡೆಯಲ್ಲಿ ಡ್ಯೂಯಲ್ ಕ್ಯಾಮರಾವನ್ನು ಹೊಂದಿದೆ. ಮುಂಬದಿಯಲ್ಲಿ 13ಎಂಪಿ + 5ಎಂಪಿ ಕ್ಯಾಮರಾವನ್ನು ಹೊಂದಿದ್ದರೆ ಹಿಂಬದಿಯಲ್ಲಿ 16 ಎಂಪಿ + 13ಎಂಪಿ ಕ್ಯಾಮರಾವನ್ನು ಹೊಂದಿದ್ದು ಇದರಲ್ಲಿ ಫೇಸ್ ಡಿಟೆಕ್ಷನ್, ಆಟೋಫೋಕಸ್ ತಂತ್ರಜ್ಞಾನದೊಂದಿಗೆ ಎಲ್‌ಇಡಿ ಫ್ಲಾಶ್‌ ಅನ್ನು ಹೊಂದಿದೆ. 
 
ಅಷ್ಟೇ ಅಲ್ಲ ಈ ಸ್ಮಾರ್ಟ್‌ಫೋನ್‌ನಲ್ಲಿ ಜಿಯೋ ಟ್ಯಾಗಿಂಗ್, ಟಚ್ ಪೋಕಸ್, ಫೇಸ್/ಸ್ಮೈಲ್ ಡಿಟೆಕ್ಷನ್, ಪನೋರಮಾ, ಎಚ್‌ಡಿಆರ್, ಮೊದಲಾದ ವೈಶಿಷ್ಟ್ಯಗಳನ್ನು ಹೊಂದಿರುವುದು ವಿಶೇಷವಾಗಿದೆ ಮತ್ತು ಇದರಲ್ಲಿ ವೈಫೈ, ವೈಫೈ ಹಾಟ್‌ಸ್ಪಾಟ್‌ ಬ್ಲೂಟೂತ್, ಜಿಪಿಎಸ್, ಎಫ್‌ಎಂ ರೇಡಿಯೊ ಮೊದಲಾದ ವೈಶಿಷ್ಟ್ಯಗಳನ್ನು ನಾವು ಇದರಲ್ಲಿ ಕಾಣಬಹುದು. ಅಲ್ಲದೇ ಇದರಲ್ಲಿ ಫಿಂಗರ್ ಪ್ರಿಂಟ್‌ ಸೆನ್ಸಾರ್, ಅಕ್ಸೆಲೆರೊಮೀಟರ್, ಗೈರೊ, ಪ್ರಾಕ್ಸಿಮಿಟಿ ಸೆನ್ಸಾರ್ ಮತ್ತು ಕಂಪಾಸ್‌ ಅನ್ನು ಈ ಫೋನ್‌ ಹೊಂದಿದೆ.
webdunia
ಇದರಲ್ಲಿ ಶೀಘ್ರವಾಗಿ ಬ್ಯಾಟರಿಯನ್ನು ಚಾರ್ಜ್ ಮಾಡಬಹುದಾಗಿದ್ದು 16000 mAh ಬ್ಯಾಟರಿ ಇರುವುದು ಈ ಫೋನ್‌ನ ವೈಶಿಷ್ಟ್ಯ ಎನ್ನಬಹುದು, ಬೆಲೆಯ ಕುರಿತಾಗಿ ಸದ್ಯಕ್ಕೆ ಕಂಪನಿ ಯಾವುದೇ ಅಧಿಕೃತ ಪ್ರಕಟಣೆಯನ್ನು ಪ್ರಕಟಿಸಿಲ್ಲವಾದರೂ ಸುಮಾರು 40000 ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.
 
ಒಟ್ಟಿನಲ್ಲಿ ಹೊಸ ಹೊಸ ವೈಶಿಷ್ಟ್ಯಗಳೊಂದಿಗೆ ಲಗ್ಗೆ ಇಡುತ್ತಿರುವ ಎನರ್ಜೈಸರ್ ಮೊಬೈಲ್ ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದ್ದು, ನಿಮಗೆ ಅಧಿಕ ಬ್ಯಾಟರಿ ಬಾಳಿಕೆ ಮೊಬೈಲ್ ಅನ್ನು ಖರೀದಿಸಬೇಕು ಎಂದೆನಿಸಿದರೆ ಈ ಸ್ಮಾರ್ಟ್‌ಫೋನ್ ಉತ್ತಮ ಎಂದು ಹೇಳಬಹುದು. 

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮಕ್ಕಳಿಗೆ ವಾಹನ ಕೊಡುವ ಮೊದಲು ಎಚ್ಚರ. ಕಂಬಿ ಎಣಿಸಬೇಕಾದಿತು...!