ಕೆಲವೊಮ್ಮೆ ಕೈ ಜಾರಿ ಮೊಬೈಲ್ ಫೋನ್ ನೀರಿಗೆ ಬೀಳುತ್ತದೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕೆಲವೊಂದು ಸ್ಮಾರ್ಟ್‌ಫೋನ್‌ಗಳು ವಾಟರ್ ಪ್ರೂಫ್ ಆಗಿರುತ್ತವೆ, ಅದು ನೀರಿನಲ್ಲಿ ಬಿದ್ದರು ಏನು ಆಗುವುದಿಲ್ಲ ಆದರೆ ಸಾಮಾನ್ಯವಾಗಿ ಬಳಸುವ ಸ್ಮಾರ್ಟ್‌ಫೋನ್‌ಗಳು ವಾಟರ್ ಪ್ರೂಫ್ ಆಗಿರುವುದಿಲ್ಲ. ಅಂತಹ ಸ್ಮಾರ್ಟ್‌ಫೋನ್‌ಗಳು ನೀರಿನಲ್ಲಿ ಬಿದ್ದರೆ ಅದಕ್ಕೆ ಪರಿಹಾರವಾಗಿ ಏನು ಮಾಡಬೇಕು ಎಂದು ನಮಗೆ ತಿಳಿದಿರುವುದಿಲ್ಲ. ಬನ್ನಿ ಸ್ಮಾರ್ಟ್‌ಫೋನ್ ನೀರಿನಲ್ಲಿ ಬಿದ್ದರೆ ಏನು ಮಾಡಬೇಕು, ಏನು ಮಾಡಬಾರದು ಎಂಬುವುದನ್ನು ತಿಳಿಯೋಣ
ಮಾಡಬೇಕಾದದು -
* ಮೊಬೈಲ್ ಫೋನ್ ನೀರಿನಲ್ಲಿ ಬಿದ್ದ ತಕ್ಷಣ, ಮೊದಲು ಫೋನ್ ಬ್ಯಾಟರಿಯನ್ನು ತೆಗೆದು, ಮೊಬೈಲ್‌ನಲ್ಲಿ ನೀರಿನ ಅಂಶವಿರದ ರೀತಿಯಲ್ಲಿ ಸ್ವಚ್ಛಗೊಳಿಸಿ.
* ಇನ್‌ಬಿಲ್ಟ್ ಬ್ಯಾಟರಿ ಫೋನ್ ಆಗಿದ್ದರೆ, ಸಿಮ್ ಸ್ಲೋಟ್ ತೆಗೆದರೆ ಸಾಕು.
* ಮೊಬೈಲ್ ಫೋನ್‌ನಲ್ಲಿರುವ ನೀರನ್ನು ಸ್ವಚ್ಛಗೊಳಿಸಿ, ಹೆಚ್ಚುವರಿ ನೀರನ್ನು ತೆಗೆದುಹಾಕಲು ನಿಮ್ಮ ಮೊಬೈಲ್ ಫೋನ್ ಅನ್ನು ಅಲ್ಲಾಡಿಸಿ.
* ಒಂದು ಪ್ಲ್ಯಾಸ್ಟಿಕ್ ಕವರ್‌ನಲ್ಲಿ ಅಕ್ಕಿಯನ್ನು ಹಾಕಿ, ಅದರೊಳಗೆ ಮೊಬೈಲ್ ಫೋನ್ ಹಾಕಿ ಪ್ಯಾಕ್ ಮಾಡಿ 2-3 ದಿನಗಳಕಾಲ ಇರಿಸಿ. ಹೀಗೆ ಮಾಡುವುದರಿಂದ ಮೊಬೈಲ್ ಫೋನ್‌ನಲ್ಲಿರುವ ತೇವಾಂಶವನ್ನು ಅಕ್ಕಿ ಹೀರಿಕೊಳ್ಳುತ್ತದೆ.
* 2-3 ದಿನಗಳ ನಂತರ ಮತ್ತೆ ಫೋನ್‌ನಿಂದ ತೆಗೆದ ಬ್ಯಾಟರಿ, ಮೆಮೊರಿ ಕಾರ್ಡ್, ಸಿಮ್ ಸ್ಲೋಟ್ ಅನ್ನು ಹಾಕಿ ಫೋನ್ ಆನ್ ಮಾಡಿ.
* ಹೀಗೆ ಮಾಡಿದ ನಂತರವೂ ಫೋನ್ ಆನ್ ಆಗದಿದ್ದರೆ, ಸರ್ವಿಸ್ ಸೆಂಟರ್‌ಗೆ ಭೇಟಿ ನೀಡಬೇಕಾಗುತ್ತದೆ.
ಮಾಡಬಾರದು -
* ಹೇರ್ ಡ್ರೈಯರ್ ಬಳಸಿ ಮೊಬೈಲ್ ಅನ್ನು ಒಣಗಿಸಬೇಡಿ.
* ಮೊಬೈಲ್‌ನಲ್ಲಿ ನೀರು ಹೋದಾಗ ಹೇಡ್‌ಫೋನ್, ಯುಎಸ್‌ಬಿ ಕೇಬಲ್‌ಗಳನ್ನು ಪ್ಲಗ್ ಮಾಡಬೇಡಿ.
* ನೀರು ಸೇರಿಕೊಂಡ ಸಾಧನವನ್ನು ಬೇರೆ ಸಾಧನದೊಂದಿಗೆ ಪ್ಲಗ್ ಮಾಡಬೇಡಿ.
* ನೀರು ಸೇರಿಕೊಂಡ ಸಾಧನದಿಂದ ತೇವಾಂಶವನ್ನು ತೆಗೆಯುವ ವಿಚಾರದಲ್ಲಿ ಮೊಬೈಲ್ ಅನ್ನು ಮೈಕ್ರೋವೇವ್‌ನಲ್ಲಿ ಇರಿಸಬೇಡಿ.