ನವದೆಹಲಿ ಏರ್ ಡೆಕ್ಕನ್ ಏರ್ಲೈನ್ಸ್ ಎಂದರೆ ಮೊದಲಿಗೆ ನೆನಪಾಗುವುದು ಒಂದು ರೂಪಾಯಿ ವಿಮಾನಯಾನ. ಈಗ ಮತ್ತದೆ 1 ರೂ. ಯೋಜನೆಯೊಂದಿಗೆ ಏರ್ ಡೆಕ್ಕನ್ ಶೀಘ್ರದಲ್ಲೇ ಮತ್ತೊಮ್ಮೆ ಅದೇ ಸೇವೆಯನ್ನು ನೀಡುವುದಾಗಿ ಹೇಳಿದೆ.
ಸಣ್ಣ ನಗರಗಳಿಗೆ ಅಗ್ಗದ ವಿಮಾನ ಸೇವೆ ಕಲ್ಪಿಸುವ ಕೇಂದ್ರ ಸರಕಾರದ ಉಡಾನ್ ಯೋಜನೆ ಅಡಿಯಲ್ಲಿ ಏರ್ ಡೆಕ್ಕನ್ ಕಾರ್ಯಾಚರಣೆ ಆರಂಭಗೊಳ್ಳಲಿದೆ. ಈ ವಿಮಾನಗಳಲ್ಲಿ ಅಗ್ಗದ ದರ, ಇದರೊಟ್ಟಿಗೆ ಕೆಲವು ಅದೃಷ್ಟಶಾಲಿಗಳಿಗೆ 1 ರೂಪಾಯಿ ವಿಮಾನಯಾನದ ಭಾಗ್ಯವೂ ಸಿಗಲಿದೆ. ದೆಹಲಿ, ಮುಂಬೈ, ಕೋಲ್ಕತಾ, ಶಿಲ್ಲಾಂಗ್ ನಡುವೆ ಸೇವೆ ನೀಡಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ