Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬ್ರೆಜಿಲ್ನ 2 ಕಂಪನಿ ಜೊತೆ Bharat Biotech ಒಪ್ಪಂದ ರದ್ದು!

ಬ್ರೆಜಿಲ್ನ 2 ಕಂಪನಿ ಜೊತೆ Bharat Biotech ಒಪ್ಪಂದ ರದ್ದು!
ಬ್ರೆಜಿಲ್ , ಶನಿವಾರ, 24 ಜುಲೈ 2021 (11:44 IST)

ಬ್ರೆಜಿಲ್ (ಜು.24): ಭ್ರಷ್ಟಾಚಾರದ ಆರೋಪದ ಬೆನ್ನಲ್ಲೇ ಕೋವಾಕ್ಸಿನ್ಗಾಗಿ ಬ್ರೆಜಿಲ್ ಪಾಲುದಾರರೊಂದಿಗಿನ ಒಪ್ಪಂದವನ್ನು ಭಾರತ್ ಬಯೋಟೆಕ್ ರದ್ದುಗೊಳಿಸಿದೆ. ಈ ಬಗ್ಗೆ ವರದಿ ಮಾಡಿರುವ ಸುದ್ದಿ ಸಂಸ್ಥೆ ಪಿಟಿಐ ಬ್ರೆಜಿಲ್ ಮಾರುಕಟ್ಟೆಗೆ ತನ್ನ ಕೋವಿಡ್ -19 ಲಸಿಕೆ ಕೋವಾಕ್ಸಿನ್ಗಾಗಿ Precisa Medicamentos ಹಾಗೂ Envixia Pharmaceuticals LLC ಜೊತೆ ಮಾಡಿದ್ದ ಒಪ್ಪಂದಗಳನ್ನು ರದ್ದುಗೊಳಿಸಿದೆ ಎಂದು ಔಷಧೀಯ ಕಂಪನಿ ಭಾರತ್ ಬಯೋಟೆಕ್ ಹೇಳಿರುವುದಾಗಿ ತಿಳಿಸಿದೆ.



* ಭ್ರಷ್ಟಾಚಾರದ ಆರೋಪದ ಬೆನ್ನಲ್ಲೇ ಬ್ರೆಜಿಲ್ ಕಂಪನಿ ಜೊತೆಗಿನ ಡೀಲ್ ರದ್ದು
* ಕೋವಾಕ್ಸಿನ್ಗಾಗಿ ಬ್ರೆಜಿಲ್ ಪಾಲುದಾರರೊಂದಿಗಿನ ಒಪ್ಪಂದವನ್ನು ರದ್ದುಗೊಳಿಸಿದ ಭಾರತ್ ಬಯೋಟೆಕ್
* ವಿವಾದ ಸೃಷ್ಟಿಸಿತ್ತು ಬ್ರೆಜಿಲ್ ಸರ್ಕಾರದೊಂದಿಗಿನ 20 ಮಿಲಿಯನ್ ಡೋಸ್ ಲಸಿಕೆ ಪೂರೈಸುವ ಒಪ್ಪಂದ

ಬ್ರೆಜಿಲ್ ಸರ್ಕಾರದೊಂದಿಗಿನ ಲಸಿಕೆಯ 20 ಮಿಲಿಯನ್ ಡೋಸ್ ಪೂರೈಸುವ ಒಪ್ಪಂದವು ವಿವಾದಕ್ಕೀಡಾಗಿ ತನಿಖೆಗೆ ನಡೆಸುವ ಒತ್ತಾಯವೂ ಕೇಳಿ ಬಂದಿತ್ತು. ಈ ಕಾರಣಕ್ಕಾಗಿ ಎಂಒಯು ರದ್ದುಗೊಳಿಸಲಾಗಿದೆ ಎನ್ನಲಾಗಿದೆ. ಬ್ರೆಜಿಲ್ನಲ್ಲಿನ ಪ್ರೆಸಿಸಾ ಮೆಡಿಕಮೆಂಟೋಸ್ ಭಾರತ್ ಬಯೋಟೆಕ್ನ ಪಾಲುದಾರರಾಗಿದ್ದು, ನಿಯಂತ್ರಕ ಸಲ್ಲಿಕೆಗಳು, ಪರವಾನಗಿ, ವಿತರಣೆ, ವಿಮೆ ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳ ನಡವಳಿಕೆಗಳೊಂದಿಗೆ ಸಹಾಯ, ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುತ್ತದೆ.
"ಕಂಪನಿಯು ತಕ್ಷಣವೇ ಜಾರಿಗೊಳ್ಳಿವಂತೆ ಈ ಒಪ್ಪಂದವನ್ನು ಮುಕ್ತಾಯಗೊಳಿಸಿದೆ. ಇದರ ಹೊರತಾಗಿಯೂ, ಬ್ರೆಜಿಲ್ನ ಔಷಧೀಯ ನಿಯಂತ್ರಣ ಸಂಸ್ಥೆ ANVISA ಯೊಂದಿಗೆ ಕೋವಾಕ್ಸಿನ್ ನಿಯಂತ್ರಣ ಅನುಮೋದನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಭಾರತ್ ಬಯೋಟೆಕ್ ಶ್ರದ್ಧೆಯಿಂದ ಕೆಲಸ ಮಾಡುತ್ತದೆ" ಎಂದು ಕಂಪನಿ ತಿಳಿಸಿದೆ.
ಇನ್ನು ಭಾರತ್ ಬಯೋಟೆಕ್ ಆಯಾ ದೇಶದಲ್ಲಿ ಅನ್ವಯವಾಗುವ ಕಾನೂನು ಅವಶ್ಯಕತೆಗಳಿಗೆ ಅನುಗುಣವಾಗಿ ವಿವಿಧ ದೇಶಗಳಲ್ಲಿ ಅನುಮೋದನೆಗಳನ್ನು ಪಡೆಯುತ್ತಿದೆ.
ಭಾರತ್ ಬಯೋಟೆಕ್ ಬ್ರೆಜಿಲ್ನಲ್ಲಿ ಕೊವಾಕ್ಸಿನ್ ಪರಿಚಯಿಸುವ ಉದ್ದೇಶದಿಂದ ನವೆಂಬರ್ 20 ರಂದು ಪ್ರೆಸಿಸಾ ಮೆಡಿಕಮೆಂಟೋಸ್ ಮತ್ತು ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್ ಎಲ್ಎಲ್ ಸಿ ಜೊತೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿತು. ಲಸಿಕೆಯ ಜಾಗತಿಕ ಬೆಲೆಯನ್ನು ಅಮೆರಿಕನ್ ಡಾಲರ್ 15-20ರ ನಡುವೆ ನಿಗದಿಪಡಿಸಲಾಗಿದೆ ಮತ್ತು ಅದರ ಪ್ರಕಾರ ಬ್ರೆಜಿಲ್ ಸರ್ಕಾರಕ್ಕೆ ಪ್ರತಿ ಡೋಸ್ಗೆ ಅಮೆರಿಕನ್ ಡಾಲರ್ 15 ದರದಲ್ಲಿ ನೀಡಲಾಯಿತು ಎಂದು ಭಾರತ್ ಬಯೋಟೆಕ್ ಹೇಳಿದೆ. ಇದಕ್ಕಾಗಿ ಯಾವುದೇ ಮುಂಗಡ ಪಾವತಿಯನ್ನು ಸ್ವೀಕರಿಸಿಲ್ಲ ಅಥವಾ ಬ್ರೆಜಿಲ್ನ ಆರೋಗ್ಯ ಸಚಿವಾಲಯಕ್ಕೆ ಯಾವುದೇ ಲಸಿಕೆಗಳನ್ನು ಸರಬರಾಜು ಮಾಡಿಲ್ಲ ಎಂದು ಕಂಪನಿ ತಿಳಿಸಿದೆ.
ಲಸಿಕೆ ತಯಾರಕರು ಅದರ ಜಾಗತಿಕ ವ್ಯವಹಾರಗಳನ್ನು ಒಳಗೊಂಡಂತೆ ಅದರ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಳೀಯ ಕಾನೂನುಗಳಿಗೆ ಅನುಗುಣವಾಗಿ ನಡೆಸಲಾಗುತ್ತದೆ ಮತ್ತು ಕಂಪನಿಯು ಎಲ್ಲಾ ಸಮಯದಲ್ಲೂ ನೈತಿಕತೆ, ಸಮಗ್ರತೆ ಮತ್ತು ಅನುಸರಣೆಯ ಉನ್ನತ ಮಾನದಂಡಗಳನ್ನು ಜಾರಿಗೊಳಿಸುತ್ತದೆ ಮತ್ತು ಪಾಲಿಸುತ್ತದೆ ಎಂದು ಹೇಳಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಗಂಡನನ್ನೇ ಗೆಳೆಯನ ಜೊತೆ ಸೇರಿ ಕೊಂದ ಪತ್ನಿ