Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಾಹನ ಸವಾರರೆ ಎಚ್ಚರ! ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸಿದರೆ ಬೀಳುತ್ತೆ ದಂಡ

ವಾಹನ ಸವಾರರೆ ಎಚ್ಚರ! ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸಿದರೆ ಬೀಳುತ್ತೆ ದಂಡ
ನವದೆಹಲಿ , ಮಂಗಳವಾರ, 25 ಜೂನ್ 2019 (11:50 IST)
ನವದೆಹಲಿ : ಭಾರಿ ದಂಡ ಹಾಗೂ ಕಾನೂನಿನಡಿ ಶಿಕ್ಷೆಗೊಳಪಡಿಸುವ ಮೋಟಾರು ವಾಹನ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಮರು ಮಂಡನೆಯಾಗಲಿದ್ದು, ಇನ್ನು ಮುಂದೆ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಬಾರೀ ದಂಡ ಬೀಳಲಿದೆ ಎನ್ನಲಾಗಿದೆ.




ಹೌದು ಕಳೆದ ಲೋಕಸಭೆಯಲ್ಲಿ ಈ ವಿಧೇಯಕ ಅಂಗೀಕಾರ ಪಡೆದಿತ್ತು. ಆದರೆ ರಾಜ್ಯಸಭೆಯಲ್ಲಿ  ಈ ವಿಧೇಯಕಕ್ಕೆ ಒಪ್ಪಿಗೆ ಸಿಗಲಿಲ್ಲ. ಈ ಹಿನ್ನಲೆಯಲ್ಲಿ ಈ ಬಾರಿ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಈ ವಿಧೇಯಕ ಮತ್ತೆ ಮಂಡನೆಯಾಗಲಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.


ಒಂದು ವೇಳೆ ಈ ವಿಧೇಯಕ್ಕೆ ಅಂಗೀಕಾರ ಪಡೆದರೆ ವಾಹನ ಸವಾರರಿಗೆ ಬಾರೀ ದಂಡ ಬೀಳಲಿದೆ. ತುರ್ತುಸೇವೆ ವಾಹನಗಳಿಗೆ ದಾರಿ ಬಿಡದಿದ್ದರೆ 10 ಸಾವಿರ ರೂ. ದಂಡ, ಅನರ್ಹರಾಗಿದ್ದರೂ ವಾಹನ ಚಾಲನೆ ಮಾಡಿದರೆ 10 ಸಾವಿರ ರೂ. ದಂಡ, ಡಿಎಲ್ ನಿಯಮ ಉಲ್ಲಂಘಿಸಿದರೆ 1 ಲಕ್ಷ ರೂ., ಅತಿ ವೇಗದ ಚಾಲನೆಗೆ 1 ಸಾವಿರದಿಂದ 2 ಸಾವಿರ ರೂ., ವಿಮೆ ರಹಿತ ವಾಹನ ಚಾಲನೆ ಮಾಡಿದರೆ 2 ಸಾವಿರ ರೂ., ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ರಹಿತ ವಾಹನ ಚಾಲನೆಗೆ 1ಸಾವಿರ ರೂ. ದಂಡ ಜೊತೆಗೆ ಮೂರು ತಿಂಗಳು ಡಿಎಲ್ ಅಮಾನತು, ಅಪ್ರಾಪ್ತರ ವಾಹನ ಚಾಲನೆಗೆ 25 ಸಾವಿರ ರೂ. ದಂಡ ಹಾಗೂ ಪಾಲಕರ ವಿರುದ್ಧ ಕ್ರಮ, ಪ್ರಾಧಿಕಾರದ ಆದೇಶ ಉಲ್ಲಂಘನೆಗೆ 2 ಸಾವಿರ ರೂ., ಡಿಎಲ್ ಇಲ್ಲದೆ ವಾಹನ ಚಾಲನೆ 5 ಸಾವಿರ ರೂ., ನಿಗದಿತ ತೂಕಕ್ಕಿಂತ ಹೆಚ್ಚು ಪ್ರಮಾಣದ ಸಾಗಣೆಗೆ 20 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎನ್ನಲಾಗಿದೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ರಾಜಸ್ಥಾನದ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ನಿಧನ