ದ್ವೀಚಕ್ರ ತಯಾರಿಕೆಯಲ್ಲಿ ಅಗ್ರಗಣ್ಯದಲ್ಲಿರುವ ಬಜಾಜ್ ತನ್ನ ಹೊಸ ಮಾದರಿಯ ಬೈಕ್ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಈಗಾಗಲೇ ತನ್ನ ವಿನೂತನ ಮಾದರಿಯಾದ ಡೊಮಿನರ್ 400 ಅನ್ನು ಬಿಡುಗಡೆಗೊಳಿಸಿ ಎಲ್ಲರಿಂದಲೂ ಪ್ರಶಂಸೆಗೆ ಒಳಗಾಗಿದ್ದ ಬಜಾಜ್ ಸಂಸ್ಥೆ, ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸ್ವಲ್ಪ ಮಟ್ಟಿಗೆ ಡೊಮಿನರ್ ಹೋಲುವ ಬಜಾಜ್ ಪಲ್ಸರ್ ಎನ್‌ಎಸ್ 200 ಬಿಡುಗಡೆ ಮಾಡಿದೆ.
ಇಂದಿನ ಯುವಜನತೆಯನ್ನು ಗಮನದಲ್ಲಿರಿಸಿಕೊಂಡು ಈ ಬೈಕ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಇದರ ಹೊರವಿನ್ಯಾಸ ತುಂಬಾ ಆಕರ್ಷಕವಾಗಿದೆ. ಇದರಲ್ಲಿ 199.5 ಸಿಸಿ ಟ್ರಿಪಲ್ ಸ್ಪಾರ್ಕ್ DTS-i ಎಂಜಿನ್ ಅನ್ನು ಅಳವಡಿಸಲಾಗಿದ್ದು, ಲಿಕ್ವೀಡ್ ಕೂಲ್ಡ್ ತಂತ್ರಜ್ಞಾನವನ್ನು ಸಹ ಈ ಎಂಜಿನ್‌ನಲ್ಲಿ ನಾವು ಕಾಣಬಹುದಾಗಿದೆ. ಇದು 9500rpm ನಲ್ಲಿ 23.5ps ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಈ ಬೈಕ್ ಹೊಂದಿದೆ. ಇದರಲ್ಲಿ 6 ಗೇರ್‌ಬಾಕ್ಸ್‌ಗಳಿದ್ದು ಟ್ಯೂಬ್‌ಲೆಸ್ ಟೈಯರ್‌ಗಳನ್ನು ಅಳವಡಿಸಲಾಗಿದೆ. ಇದು ಪ್ರತಿ ಲೀಟರ್‌ಗೆ ಸರಾಸರಿ 36.1 ಕಿಮೀ ಮೈಲೇಜ್ ನೀಡುತ್ತದೆ ಹಾಗೂ ಹೆದ್ದಾರಿಯಲ್ಲಿ 39.7 ರಷ್ಟು ಮೈಲೇಜ್ ನೀಡುತ್ತದೆ. ಇದು ಗಂಟೆಗೆ 125 ಕಿಮೀ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಬೈಕ್ ಮುಂಭಾಗದಲ್ಲಿ 280ಎಂಎಂ ಪಿಟಲ್ ಡಿಸ್ಕ್ ಅನ್ನು ಹೊಂದಿದ್ದು ಹಿಂಭಾಗದಲ್ಲಿ ತತ್‌ಕ್ಷಣದಲ್ಲಿ ನಿಲ್ಲುವ ಹಾಗೆ ರಚಿಸಿರುವ 230ಎಂಎಂ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಅಷ್ಟೇ ಅಲ್ಲ ಇದರ ಸಸ್ಪೆನ್‌ಶನ್‌ಗಳು ಉತ್ತಮವಾಗಿದ್ದು, ಹಿಂಭಾಗದಲ್ಲಿ ಕ್ಯಾನಿಸ್ಟರ್ ಜೊತೆಗೆ ನಿಟ್ರೊಕ್ಸ್ ಮೊನೊ ಶಾಕ್‌ಒಬ್ಸಾರ್ ಹೊಂದಿದೆ ಹಾಗೆಯೇ ಮುಂಭಾಗದಲ್ಲಿ ಎಂಟಿ ಪ್ರಿಕ್‌ಶನ್ ಬುಷ್ ಜೊತೆಗೆ ಟೆಲಿಸ್ಕೋಪಿಕ್ ಸಸ್ಪೆನ್‌ಶನ್ ಇರುವ ಕಾರಣ ಕಡಿದಾದ ರಸ್ತೆಯಲ್ಲಿ ಸುಲಭವಾಗಿ ಚಲಾಯಿಸಲು ಇವು ಅನುಕೂಲ ಮಾಡಿಕೊಡಲಿದೆ.
ಇದರ ಗ್ರೌಂಡ್ ಕ್ಲಿಯರೆನ್ಸ್ 169ಎಂಎಂ ಇದ್ದು ಈ ಬೈಕ್ 152 ಕೇಜಿ ಭಾರವನ್ನು ಹೊಂದಿದೆ ಅಲ್ಲದೇ ಇದರಲ್ಲಿ 12 ಲೀ ಇಂಧನ ಸಂಗ್ರಹಣೆ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲ ಇದರಲ್ಲಿ 12 ವೋ. ಬ್ಯಾಟರಿ ಇದ್ದು AHO ಜೊತೆಗೆ ಬ್ಲೂ ಟಿಂಜ್ ಮಾದರಿಯ ಹೆಡ್‌ಲ್ಯಾಪ್ ಬೈಕಿನ ಲೂಕ್ ಅನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಎಲ್‌ಇಡಿ ಟೈಲ್ ಲೈಟ್‌ಗಳನ್ನು ಹೊಂದಿದೆ ಆದರೆ ಪ್ರೊಜೆಕ್ಟರ್ ಹೆಡ್ ಲೈಟ್‌ಗಳನ್ನು ಇದರಲ್ಲಿ ಅಳವಡಿಸಲಾಗಿಲ್ಲ.
ಈ ಬೈಕ್ ಎರಡು ವರ್ಷಗಳವರೆಗಿನ ವಾರಂಟಿ ಮತ್ತು ಮೂವತ್ತು ಸಾವಿರ ಕಿಮೀಗಳಷ್ಟು ಸ್ಟ್ಯಾಂಡರ್ಡ್ ವಾರಂಟಿಯನ್ನು ಸಹ ಇದು ಹೊಂದಿದೆ. ಬಜಾಜ್ ಪಲ್ಸರ್ ಎನ್‌ಎಸ್200 ನ ಎಕ್ಸ್ ಶೋ ರೂಮ್ (ದೆಹಲಿ) ಬೆಲೆಯು 1 ಲಕ್ಷವಾಗಿದ್ದು ಇದರ ಉನ್ನತ ದರ್ಜೆಯ ಮಾದರಿ ಮತ್ತು ಅದರ ABS ರೂಪಾಂತರಗಳಿಗೆ ಮೂಲ ಎಕ್ಸ್ ಶೋ ರೂಮ್ (ದೆಹಲಿ) ಬೆಲೆ 1.09 ಲಕ್ಷವಾಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.