ಹಿಂದೂಜಾ ಗ್ರೂಪ್‌ನ ಅಶೋಕ್‌ಲೇಲ್ಯಾಂಡ್ ಕಂಪೆನಿ ಎರಡು ಹೊಸ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ಒಂದು ಲಘು ವಾಣಿಜ್ಯ ವಾಹನ ’ಪಾರ್ಟನರ್’ (ಎಲ್‌ಸಿವಿ), ಇನ್ನೊಂದು ಮಧ್ಯಮ ದರ್ಜೆಯ ವಾಣಿಜ್ಯ ವಾಹನ ’ಗುರು’ (ಐಸಿವಿ) .
ಪಾರ್ಟನರ್ ವಾಹನ ಎರಡು ವಿಧಗಳಲ್ಲಿ ಲಭ್ಯ. ಆರು ಚಕ್ರಗಳುಳ್ಳ ವಾಹನ ಬೆಲೆ ರೂ.10.59 ಲಕ್ಷ (ಎಕ್ಸ್‌ಶೋ ರೂಂ ಚೆನ್ನೈ), ನಾಲ್ಕು ಚಕ್ರಗಳುಳ್ಳ ವಾಹನ ಬೆಲೆ ರೂ.10.29 ಲಕ್ಷಗಳು. ಎಸಿ ಕ್ಯಾಬಿನ್‌ವುಳ್ಳ ಮೊದಲ ಎಲ್‍ಸಿವಿ ವಾಹನ ಇದು ಎಂದು ಕಂಪೆನಿ ತಿಳಿಸಿದೆ. 6 ಮತ್ತು 7.20 ಟನ್ ವಿಭಾಗಗಳಲ್ಲಿ ಪಾರ್ಟನರ್ ವಾಹನ ಲಭ್ಯ.
ಸರಕು ಸಾಗಣೆ ವಾಹನ ದೃಢತೆ, ಕ್ಯಾಬಿನ್‌ನಲ್ಲಿ ಕಾರು ಸೌಲಭ್ಯಗಳಿರುವ ಗುರು ಬೆಲೆ ರೂ.14.35-16.72 ಲಕ್ಷಗಳ ನಡುವೆ ಇದೆ. ಬಿಎಸ್ 3, ಬಿಎಸ್ 4 ಮಾನದಂಡಗಳೊಂದಿಗೆ 12, 13 ಟನ್ನುಗಳ ವಿಭಾಗದಲ್ಲಿ ಈ ವಾಹನ ಲಭ್ಯ. ಎಲ್‍ಸಿವಿ, ಐಸಿವಿ ವಿಭಾಗಗಳಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಈ ಹೊಸ ವಾಹನಗಳು ಉಪಯೋಗಕ್ಕೆ ಬರುತ್ತವೆಂದು ಅಶೋಕ್ ಲೇಲ್ಯಾಂಡ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಓ), ವ್ಯವಸ್ಥಾಪಕ ನಿರ್ದೇಶಕ ವಿನೋಕ್ ಕೆ ದಾಸರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.