ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನೊಂದಿಗೆ ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಅಡಿಯಿಡುತ್ತಿರುವ ನೋಕಿಯಾ ಬಿಡುಗಡೆಗೂ ಮುನ್ನವೇ ಸಂಚಲನ ಸೃಷ್ಟಿಸಿದೆ. ಮೂರು ವರ್ಷಗಳ ಬಳಿಕ ಕಂಪೆನಿ ಬಿಡುಗಡೆ ಮಾಡುತ್ತಿರುವ ನೋಕಿಯಾ 6 ಬಿಡುಗಡೆಗೆ ವೇದಿಗೆ ಸಿದ್ಧವಾಗಿದೆ.
ಇದೇ ಜನವರಿ 19ರಿಂದ ಚೀನಾದಲ್ಲಿ ಬಿಡುಗಡೆಯಾಗಲಿದ್ದು, ಇದನ್ನು ಕೊಳ್ಳಲು ಈಗಾಗಲೆ 10 ಲಕ್ಷಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ. ಜೆಡಿ.ಕಾಮ್‍ನಲ್ಲಿ ಫ್ಲಾಶ್‌ಸೇಲ್‌ನಡಿ ಇವನ್ನು ಮಾರಾಟಕ್ಕೆ ಇಡಲಾಗಿದೆ. ಆ ದಿನ ಎಷ್ಟು ಫೋನ್‌ಗಳನ್ನು ಮಾರಾಟಕ್ಕೆ ಇಡಲಾಗುತ್ತದೆ ಎಂಬುದನ್ನು ಕಂಪೆನಿ ತಿಳಿಸಿಲ್ಲ.
ಫೊನ್ ಬಿಡುಗಡೆ ಮಾಡಲಾಗುತ್ತಿದೆ ಎಂದು ಘೋಷಿಸಿದ 24 ಗಂಟೆಗಳಲ್ಲೇ 2.5 ಲಕ್ಷ ಮಂದಿ ರಿಜಿಸ್ಟರ್ ಮಾಡಿಕೊಂಡಿರುವುದು ವಿಶೇಷ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಬರುತ್ತಿರುವ ಇದರ ಬೆಲೆ ರೂ.17,000 ಎನ್ನಲಾಗಿದೆ. ಈ ವರ್ಷ ಏಪ್ರಿಲ್‌ನಲ್ಲಿ ಭಾರತ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.