Arecanut price today: ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ನಿರಾಸೆ

Krishnaveni K
ಬುಧವಾರ, 28 ಮೇ 2025 (11:10 IST)
ಬೆಂಗಳೂರು: ಏರುಗತಿಯಲ್ಲಿದ್ದ ಅಡಿಕೆ ಬೆಲೆ ಈಗ ಸತತ ಮೂರನೇ ದಿನವೂ ಯಥಾಸ್ಥಿತಿ ಕಾಯ್ದುಕೊಂಡಿದೆ. ಏರಿಕೆ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ನಿರಾಸೆಯಾಗಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಹೇಗಿದೆ ಇಲ್ಲಿದೆ ವಿವರ.

ಕಳೆದ ನಾಲ್ಕೈದು ದಿನಗಳಿಂದ ಅಡಿಕೆ ಬೆಲೆ ಏರಿಕೆಯಾಗುತ್ತಿರುವುದು ಬೆಳೆಗಾರರಿಗೆ ಚೇತರಿಕೆ ತಂದಿದೆ. ಮೊನ್ನೆಯಿಂದ ಅಡಿಕೆ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗಿತ್ತು. ಆದರೆ  ಇಂದು ಸತತ ಮೂರನೇ ದಿನವೂ ಬೆಲೆ ಯಥಾ ಸ್ಥಿತಿಯಲ್ಲಿದೆ. ಇಂದು ಹೊಸ ಅಡಿಕೆ ಬೆಲೆ 495 ರೂ.ಗಳಷ್ಟೇ ಇದೆ.  ಹಳೆ ಅಡಿಕೆ ಬೆಲೆ ಯೂ ನಿನ್ನೆಯಷ್ಟೇ ಅಂದರೆ ಗರಿಷ್ಠ 520 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 520 ರೂ.ಗಳಾಗಿವೆ.

ಹೊಸ ಫಟೋರ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ 370 ರೂ.ಗಳಷ್ಟಿದೆ. ಹಳೆ ಫಟೋರ ದರ 375 ರೂ.ಗಳಷ್ಟೇ ಇದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಇಂದೂ ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 260 ರೂ.ಗಳಾಗಿವೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ ತಲಾ 315 ರೂ.ಆಗಿದೆ.
ಕಾಳುಮೆಣಸು ದರ
ಆದರೆ ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಕಾಳುಮೆಣಸು ಬೆಳೆಗಾರರಿಗೆ ಮಾತ್ರ ಮತ್ತೆ ನಿರಾಸೆಯಾಗಿದೆ. ಇಂದು ಮತ್ತೆ 5 ರೂ. ಇಳಿಕೆಯಾಗಿದ್ದು 650 ರೂ.ಗಳಾಗಿದೆ. ಇನ್ನು ಒಣಕೊಬ್ಬರಿ ಬೆಲೆಯೂ ಯಥಾಸ್ಥಿತಿಯಲ್ಲಿದ್ದು ಗರಿಷ್ಠ 190 ರೂ.ಗಳಷ್ಟಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಇಂದು ಈ ಜಿಲ್ಲೆಯವರು ಹವಾಮಾನ ವರದಿ ತಪ್ಪದೇ ಗಮನಿಸಿ

ಕೇಂದ್ರ ಜಾತಿಗಣತಿ ಮಾಡುವಾಗಲೂ ಬಿಜೆಪಿ ನಾಯಕರಿಗೆ ವಿರೋಧಿಸುವ ಧಮ್ ಇದ್ಯಾ: ಸಿದ್ದರಾಮಯ್ಯ

ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಗೆದ್ದರೆ ಯುದ್ಧ ಗೆದ್ದಂತಾ: ಬಿಕೆ ಹರಿಪ್ರಸಾದ್ ವ್ಯಂಗ್ಯ

ಕರ್ನಾಟಕ ಜಾತಿ ಸಮೀಕ್ಷೆ ವಿರೋಧಿಸುತ್ತಿರುವ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಫುಲ್ ಗರಂ

ಬೆಂಗಳೂರಿನಲ್ಲಿ ಯಾವಾಗ ಜಾತಿಗಣತಿ ಆರಂಭ: ಇಲ್ಲಿದೆ ಉತ್ತರ

ಮುಂದಿನ ಸುದ್ದಿ
Show comments