ನವದೆಹಲಿ: ವೈರಸ್ ಸಮಸ್ಯೆಗೆ ತುತ್ತಾಗಿರುವ ಬಿಎಸ್ಎನ್ಎಲ್ ಬ್ರಾಡ್ ಬ್ಯಾಂಡ್ ವ್ಯವಸ್ಥೆ ಗ್ರಾಹಕರಿಗೆ ಶಾಕ್ ನೀಡಿದೆ. ವೈರಸ್ ತೊಂದರೆ ತಪ್ಪಿಸಲು ತಕ್ಷಣವೇ ಪಾಸ್ ವರ್ಡ್ ಬದಲಿಸಲು ಸಂಸ್ಥೆ ಸೂಚನೆ ನೀಡಿದೆ.
ವೈರಸ್ ತೊಂದರೆಯನ್ನು ನಿವಾರಿಸಲು ಪ್ರಯತ್ನಗಳು ನಡೆಯುತ್ತಿವೆ. ಹಾಗಿದ್ದರೂ ತಮ್ಮ ತಮ್ಮ ಅಂತರ್ಜಾಲ ತಾಣಗಳನ್ನು ರಕ್ಷಿಸಿಕೊಳ್ಳಲು ಪಾಸ್ ವರ್ಡ್ ಬದಲಿಸಿ ಎಂದು ಬಿಎಸ್ಎನ್ಎಲ್ ಗ್ರಾಹಕರಿಗೆ ತಿಳಿಸಿದೆ.
ಸುಮಾರು 2000 ಮಾಡೆಮ್ ಗಳು ವೈರಸ್ ದಾಳಿಗೆ ತುತ್ತಾಗಿವೆ ಎನ್ನಲಾಗಿದೆ. ಇದರಿಂದ ಬಿಎಸ್ಎನ್ಎಲ್ ನ ಆಂತರಿಕ ವ್ಯವಸ್ಥೆಗೆ ಯಾವುದೇ ಅಪಾಯವಿಲ್ಲ. ಹಾಗಿದ್ದರೂ ಸುರಕ್ಷತಾ ದೃಷ್ಟಿಯಿಂದ ಪಾಸ್ ವರ್ಡ್ ಬದಲಿಸುವುದು ಒಳಿತು. ಆಡ್ಮಿನ್ ಎಂಬ ಪಾಸ್ ವರ್ಡ್ ಬಳಸುತ್ತಿದ್ದವರ ಮಾಡೆಮ್ ಗಳಷ್ಟೇ ವೈರಸ್ ದಾಳಿಗೆ ತುತ್ತಾಗಿದೆ ಎಂದು ಸಂಸ್ಥೆ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ