ದೇಶದ ಅನೇಕ ಭಾಗಗಳಲ್ಲಿ ಆಗಸ್ಟ್ 12 ರಿಂದ ಪ್ರಾರಂಭವಾಗುವ ಎಲ್ಲಾ ಬ್ಯಾಂಕುಗಳು ವ್ಯವಹಾರಕ್ಕಾಗಿ ಮುಚ್ಚಲ್ಪಡುವಂತೆ ಗ್ರಾಹಕರು ಸತತವಾಗಿ 4 ದಿನಗಳ ಕಾಲ ಶಾಖೆಗಳಲ್ಲಿ ಬ್ಯಾಂಕ್ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ.
ಬ್ಯಾಂಕ್‌ಗಳು ಸತತ ನಾಲ್ಕು ದಿನಗಳ ಕಾಲ ಕಾರ್ಯನಿರ್ವಹಿಸದಿರುವುದರಿಂದ ಗ್ರಾಹಕರು ತೀವ್ರ ತೆರೆನಾದ ತೊಂದರೆ ಎದುರಿಸುವ ಸಾಧ್ಯತೆಗಳಿವೆ. ಎಟಿಎಂ ಗಳು ಕೂಡಾ ಬರಿದಾಗಿ ಕೈಕೊಡುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ.
ನಾಳೆ ಬ್ಯಾಂಕ್‌ಗಳಿಗೆ ಎಂದಿನಂತೆ ಎರಡನೇ ಶನಿವಾರ ರಜೆ, ನಾಡಿದ್ದು ರವಿವಾರ, ಆಗಸ್ಟ್ 14 ಜನ್ಮಾಷ್ಠಮಿ ಮತ್ತು ಆಗಸ್ಟ್ 15 ರಂದು ಸ್ವಾತಂತ್ರೋತ್ಸವ ದಿನಾಚರಣೆ
ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆ ಸ್ಥಗಿತಗೊಳ್ಳುವುದರಿಂದ ವಹಿವಾಟಿನ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಎಟಿಎಂಗಳು ಕೂಡಾ ಬರಿದಾಗುವ ಸಾಧ್ಯತೆಗಳಿವೆ. ಗ್ರಾಹಕರು ಕೂಡಲೇ ಇವತ್ತೇ ಎಟಿಎಂಗೆ ತೆರಳಿ ಅಗತ್ಯವಾದ ಹಣ ಪಡೆದಿಟ್ಟುಕೊಳ್ಳುವುದು ಸೂಕ್ತ ಎನ್ನುತ್ತಾರೆ ಬ್ಯಾಂಕ್ ಉದ್ಯೋಗಿಗಳು.
ಎಲ್ಲ ಬ್ಯಾಂಕುಗಳು ಎಟಿಎಂಗಳಲ್ಲಿ ನಗದು ಲೋಡ್ ಮಾಡುವುದನ್ನು ಖಾಸಗೀಕರಣಗೊಳಿಸಿದ್ದರೂ, ದೀರ್ಘಾವಧಿಯ ರಜಾದಿನಗಳಿಂದಾಗಿ ಹಣದ ಸಂಗ್ರಹದ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.