Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರಾಗಲು ಆಧಾರ್ ವಿವರ ಕಡ್ಡಾಯ

ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರಾಗಲು ಆಧಾರ್ ವಿವರ ಕಡ್ಡಾಯ

ಲಾಲ್‌ಸಾಬ್

ಬೆಂಗಳೂರು , ಶುಕ್ರವಾರ, 29 ಡಿಸೆಂಬರ್ 2017 (12:38 IST)
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಪಿಎಫ್ಆರ್‌‌ಡಿಎ) ಅಟಲ್ ಪಿಂಚಣಿ ಯೋಜನೆಯಲ್ಲಿ (ಎಪಿವೈ) ಹೂಡಿಕೆ ಮಾಡುವುದಕ್ಕಾಗಿ ಆಧಾರ್ ವಿವರಗಳನ್ನು ಒದಗಿಸಲು ಚಂದಾದಾರರಿಗೆ ಕಡ್ಡಾಯಗೊಳಿಸಿದೆ.
ಚಂದಾದಾರರು ತಮ್ಮ ಆಧಾರ್‌ ಸಂಖ್ಯೆಯನ್ನು ಒದಗಿಸುವಕ್ಕಾಗಿ ಎಪಿವೈಗಾಗಿ ಪಿಎಫ್ಆರ್‌‌ಡಿಎ ನೋಂದಣೆ ಫಾರ್ಮ್ ಅನ್ನು ಮಾರ್ಪಡಿಸಿದೆ.
 
ತನ್ನ ಇತ್ತೀಚಿನ ಸುತ್ತೋಲೆಯಲ್ಲಿ ಪಿಎಫ್ಆರ್‌‌ಡಿಎ ಹೀಗೆ ಹೇಳಿದೆ, "ಆಧಾರ್ ಜೋಡಣೆ ಮತ್ತು ನಂತರದ ದೃಢೀಕರಣಕ್ಕಾಗಿ ಚಂದಾದಾರರ ಒಪ್ಪಿಗೆಯನ್ನು ಪಡೆಯಲು ಎಪಿವೈ ಚಂದಾದಾರರ ನೋಂದಣಿ ಫಾರ್ಮ್‌ ಅನ್ನು ಸೂಕ್ತ ರೂಪದಲ್ಲಿ ಮಾರ್ಪಡಿಸಿದೆ".
 
ಆಧಾರ್ ಆಟಲ್ ಪಿಂಚಣಿ ಯೋಜನೆಗೆ ಆಧಾರ್ ಕಡ್ಡಾಯವಾಗಿ ಸೇರಿಸುವುದು ಜನವರಿ 1, 2018 ರಿಂದ ಜಾರಿಗೆ ಬರುತ್ತದೆ.
 
ಎಲ್ಲಾ ಎಪಿವೈ-ಸೇವಾ ಪೂರೈಕೆದಾರರು ಜನವರಿ 1, 2018 ರಿಂದ ಜಾರಿಯಾಗುವ ಪರಿಷ್ಕೃತ ಸಮ್ಮತಿಯ ನಮೂನೆಯನ್ನು ಪಡೆಯಲು ಮತ್ತು ಪರಿಷ್ಕೃತ ನಮೂನೆಯ ಪ್ರಕಾರ ವಿವರಗಳನ್ನು ತಿಳಿದುಕೊಳ್ಳಲು ತಿಳಿಸಲಾಗಿದೆ. APY-SP ನ ಗ್ರಾಹಕರಾದ ಚಂದಾದಾರರ ಮೂಲಕ ಸಲ್ಲಿಸಲಾದ ಆಧಾರ್ ಮಾಹಿತಿಯನ್ನು ಅವರ ದೃಢೀಕರಣದ ಬಳಿಕ ಸಿಆರ್‌ಎಗೆ ಅದನ್ನು ಅಪ್‌ಲೋಡ್‌ ಮಾಡಲಾಗುತ್ತದೆ.
 
ಮೋದಿ ಸರಕಾರವು 2015 ರ ಮೇ ತಿಂಗಳಲ್ಲಿ ಎಪಿವೈ ಅನ್ನು ಪ್ರಾರಂಭಿಸಿದೆ. ಅಸಂಘಟಿತ ವಲಯದಲ್ಲಿನ ಕಾರ್ಮಿಕರ ನಡುವಿನ ದೀರ್ಘ ಅಪಾಯಗಳನ್ನು ಪರಿಹರಿಸಲು ಮತ್ತು ನಿವೃತ್ತಿಯ ಪಿಂಚಣೆಗೆ ಸ್ವಯಂಪ್ರೇರಣೆಯಿಂದ ಹೂಡಿಕೆ ಮಾಡಿ ಉಳಿಸಲು ಕಾರ್ಮಿಕರನ್ನು ಅಸಂಘಟಿತ ವಲಯದಲ್ಲಿ ಪ್ರೋತ್ಸಾಹಿಸಲು ಇದು ಸಹಾಯಕವಾಗಿದೆ.
 
ಎಪಿಐ ಅಡಿಯಲ್ಲಿ, ಪ್ರತಿ ಚಂದಾದಾರರು 60 ವರ್ಷ ಪೂರೈಸಿದ ಬಳಿಕ ಖಾತರಿಪಡಿಸಿದ ಕನಿಷ್ಠ ಮಾಸಿಕ ಪಿಂಚಣೆಯನ್ನು ಅಥವಾ ಅಧಿಕ ಮಾಸಿಕ ಪಿಂಚಣೆಯನ್ನು ಪಡೆಯುತ್ತಾರೆ, ಒಂದು ವೇಳೆ ಕನಿಷ್ಠ ಖಾತರಿಪಡಿಸಿದ ಪಿಂಚಣಿಗೆ ಸಂಬಂಧಿಸಿದಂತೆ ಹಿಂತಿರುಗಿಸುವ ಹಣದ ಹೂಡಿಕೆಯ ಆದಾಯವು ಹೆಚ್ಚಾಗಿದ್ದರೆ ಮಾತ್ರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಚಿಕ್ಕಮಗಳೂರಿಗೆ ಬಿಜೆಪಿ ಪರಿವರ್ತನಾ ಯಾತ್ರೆ- ಸಿ.ಟಿ.ರವಿ