Publish Date: Thu, 20 Nov 2014 (16:41 IST)
Updated Date: Thu, 20 Nov 2014 (16:42 IST)
'ಮಿಡಿ'ಯಿಂದ 'ಮಿನಿ'ಗೆ ತಾನು ಬದಲಾಯಿಸಿದುದೇಕೆಂದು ಆಫೀಸಿನ ಹುಡಗಿ ವಿವರಣೆ ನೀಡುತ್ತಿದ್ದಳು
ಗಂಡಸರು ನನ್ನ ಕಾಲುಗಳನ್ನು ನೋಡುವ ಬದಲು ನನ್ನ ಕೆಲಸವನ್ನು ನೊಡಲಾರಂಭಿಸಿದ ನಂತರ ಮಿಡಿ ಗಳನ್ನು ಬಿಟ್ಟು ಮಿನಿ ಗಳನ್ನು ತೊಡಲಾರಂಭಿಸಿದೆ ಎಂದು ವಿವರ ನೀಡಿದಳು.
ಇಬ್ಬರು ಸಹೋದ್ಯೋಗಿಗಳು ಹರಟುತ್ತಾ ಕುಳಿತಿದ್ದರು, ಬಾಸ್‌ನ ವರ್ತನೆ ನನಗೆ ಅರ್ಥ ಆಗ್ತಾ ಇಲ್ಲ?
ಅದು ಯಾವುದಯ್ಯಾ?, ಅದೇ ಕಣೋ, ಮನೇಲಿ ಅದ ಜಗಳವನ್ನು ಆಫಿಸಿನಲ್ಲಿ ಮುಂದುವರೆಸುತ್ತಾರೆ, ಇಲ್ಲಿ ಆದ ನಿರಾಶೆಯನ್ನು ಅಲ್ಲಿ ಎತ್ತಿ ಜಗಳಕ್ಕೆ ಕಾರಣ ಆಗ್ತಾರೆ.
ಪ್ರೈವೇಟ್ ಸೆಕ್ರಟರಿ- ಸರ್, ತಮ್ಮ ಶ್ರೀಮತಿಯವರು ತಮ್ಮ ಜೋತೆ ಪ್ರೈವೇಟ್ ಆಗಿ ಮಾತನಾಡಲು ಇಚ್ಚಿಸುತ್ತಿದ್ದಾರೆ?
ಬಾಸ್- ಮೆಸೇಜ್ ರಿಸೀವ್ ಮಾಡಿ ನೋಟ್ ಮಾಡಿಕೊಂಡು ಆಮೇಲೆ ನನಗೆ ತಿಳಿಸಿ.
ಏನು ಸ್ವಾಮಿ ರಜೆ ದಿನದಂದು ಆಫಿಸಿಗೆ ಬಂದಿದ್ದಿರಿ?
ಮನೆಯಲ್ಲಿ ಮಲಗಿದರೆ ನಿದ್ದೆ ಬರೋಲ್ಲ ಅದಕ್ಕೆ ಎಂದ.