Publish Date: Thu, 20 Nov 2014 (16:40 IST)
Updated Date: Thu, 20 Nov 2014 (16:41 IST)
ಈ ಪ್ರಪಂಚದಲ್ಲಿ ನನ್ನದೆಂಬುದು ಏನು ಉಳಿದಿಲ್ಲ ಅಂತ ನನ್ನ ವ್ಯಥೆ-ಕ್ಲಾರ್ಕ್ ಆಫೀಸಿನಲ್ಲಿ ಸಹೋದ್ಯೋಗಿಯೊಂದಿಗೆ ಗೋಣಗಿದ.
ತಲೆಯನ್ನು ಬಾಸ್, ಶರೀರವನ್ನು ಕಾಲಪುರುಷ, ಕಿಸೆಯನ್ನು ಹೆಂಡತಿ, ಜೀವನ ವಿಧಾನವನ್ನು ಬೆಲೆ ಏರಿಕೆ ನಿಯಂತ್ರಿಸುತ್ತಿರುವಾಗ ನನ್ನದೆಂಬುದು ಏನು ಉಳಿಯಿತು ಹೇಳಿ?
ಸಂದರ್ಶಕ- ಈ ಕಛೇರಿಯಲ್ಲಿ ಎಷ್ಟು ಜನ ಕೆಲಸ ಮಾಡುತ್ತಾರೆ?
ವ್ಯವಸ್ಥಾಪಕ- ಹತ್ತರಲ್ಲಿ ಒಬ್ಬ
ಒಬ್ಬ ರೈಲ್ವೆ ಸ್ಟೇಷನ್ ಮಾಸ್ಟರ್ ತನ್ನ ಪತ್ನಿ ನಿಧನಳಾದ ಸುದ್ದಿಯನ್ನು ತಿಳಿಸಿ, ತನ್ನ ಮೇಲಾಧಿಕಾರಿಗೆ ಹೀಗೆ ವಿನಂತಿಸಿಕೊಂಡ, ಪತ್ನಿ ನಿಧನನಾದಳು ಕೂಡಲೆ ಬದಲಿ ಕಳಸಿ.
ಸ್ಟೇಷನರಿ ಸಾಮಾನುಗಳನ್ನು ಮಿತವ್ಯಯವಾಗಿ ಬಳಸಬೇಕೆಂದು ಮೇಲಿನಿಂದ ಹುಕುಂ ಬಂದಿದೆ ಎಂದು ಹೇಳಿದ ಮ್ಯಾನೇಜರ್. ಸರಿ ಹಾಗಂತ ಒಂದು ಸುತ್ತೋಲೆ ಹೋರಡಿಸಿ ಬಿಡಿ ಎಂದು ಅಧಿಕಾರಿಗಳು.