ಕೋಲ್ಕೊತ್ತಾ: ಈ ಬಾರಿಯ ಐಪಿಎಲ್ ಬಿಡ್ಡಿಂಗ್ ನಲ್ಲಿ ಕೆಕೆಆರ್ ತಂಡ ತನ್ನ ಯಶಸ್ವಿ ನಾಯಕ ಗೌತಮ್ ಗಂಭೀರ್ ರನ್ನೇ ಕೈ ಬಿಟ್ಟಿದ್ದು ಅಚ್ಚರಿಗೆ ಕಾರಣವಾಗಿತ್ತು. ಕೋಲ್ಕೊತ್ತಾ ತಂಡವನ್ನು ಐಪಿಎಲ್ ಚಾಂಪಿಯನ್ ಮಾಡಿದ ನಾಯಕನಿಗೆ ಕೊಕ್ ನೀಡಿದ್ದೇಕೆ ಎನ್ನುವುದು ಈಗ ಬಹಿರಂಗವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರ್ ನಾವು ಗಂಭೀರ್ ರನ್ನು ಆರ್ ಟಿಎಂ ಕಾರ್ಡ್ ಬಳಸಿ ಉಳಿಸಿಕೊಳ್ಳಲು ಬಯಸಿದ್ದೆವು. ಆದರೆ ಸ್ವತಃ ಗಂಭೀರ್ ಹಾಗೆ ಮಾಡದೆ ಹರಾಜಿಗೆ ಬಿಡುವಂತೆ ಮನವಿ ಮಾಡಿದರು. ಬೇರೊಂದು ಸವಾಲು ಎದುರಿಸಲು ಬಯಸುವುದಾಗಿ ಹೇಳಿದರು. ಅದಕ್ಕೇ ಗಂಭೀರ್ ರನ್ನು ಬಿಟ್ಟುಕೊಟ್ಟೆವು ಎಂದಿದ್ದಾರೆ.
ಇದರೊಂದಿಗೆ ಗಂಭೀರ್ ಗೇ ಕೊಕ್ ಕೊಟ್ಟಿದ್ದೇಕೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದಂತಾಗಿದೆ. ಗಂಭೀರ್ ಈ ಬಾರಿ ತಮ್ಮ ತವರು ದೆಹಲಿ ತಂಡಕ್ಕೆ 2.2 ಕೋಟಿ ರೂ. ಗೆ ಹರಾಜಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ