Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೆಕ್ಸ್, ಮ್ಯಾಚ್ ಫಿಕ್ಸಿಂಗ್, ಕಿತ್ತಾಟ ಎಲ್ಲವೂ ಉಂಟು.. ಐಪಿಎಲ್`ನ ಟಾಪ್ 10 ವಿವಾದಗಳು

ಸೆಕ್ಸ್, ಮ್ಯಾಚ್ ಫಿಕ್ಸಿಂಗ್, ಕಿತ್ತಾಟ ಎಲ್ಲವೂ ಉಂಟು.. ಐಪಿಎಲ್`ನ ಟಾಪ್ 10 ವಿವಾದಗಳು
ಬೆಂಗಲೂರು , ಮಂಗಳವಾರ, 4 ಏಪ್ರಿಲ್ 2017 (18:46 IST)
ಬಿಲಿಯನ್ ಡಾಲರ್ ಬೇಬಿ ಎಂದೇ ಕರೆಯಲ್ಪಡುವ ಐಪಿಎಲ್ ಟೂರ್ನಿಯಲ್ಲಿ ವಿವಾದಕ್ಕೇನೂ ಕಡಿಮೆ ಇಲ್ಲ. ಪ್ರತಿಯೊಂದು ಸೀಸನ್ನಿನಲ್ಲೂ ಹಲವು ವಿವಾದ ಇದ್ದೇ ಇರುತ್ತೆ. ಮ್ಯಾಚ್ ಫಿಕ್ಸಿಂಗ್, ಸೆಕ್ಸ್, ಗಲಾಟೆ ಹೀಗೆ ಒಂದಾ ಎರಡಾ..? ಆದರೂ, ಐಪಿಎಲ್ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ವಿವಾದಗಳೇ ಐಪಿಎಲ್ ಜನಪ್ರಿಯತೆಗೆ ಕಾರಣವಾದವು ಎಂದರೂ ತಪ್ಪಿಲ್ಲ. ಇಂತಹ ಕೆಲ ವಿವಾದಗಳನ್ನ ಇಲ್ಲಿ ಪಟ್ಟಿ ಮಾಡಲಾಗಿದೆ.

ಶ್ರೀಶಾಂತ್`ಗೆ ಹೊಡೆದ ಭಜ್ಜಿ: 2008ರ ಪಂದ್ಯದ ವೇಳೆ ಮುಂಬೈ ತಂಡದ ಆಟಗಾರ ಭಜ್ಜಿ,  ಪಂಜಾಬ್ ತಂಡದಲ್ಲಿದ್ದ ಶ್ರೀಶಾಂತ್`ಗೆ ಕಪಾಳಮೋಕ್ಷ ಮಾಡಿದ್ದರು. ಮೈದಾನದಲ್ಲಿ ತಮ್ಮನ್ನ ಕಿಚಾಯಿಸಿದ ಶ್ರೀಶಾಂತ್ ಬಳಿಗೆ ಬಂದ ಭಜ್ಜಿ ಕಪಾಳಕ್ಕೆ ಬಾರಿಸಿದ್ದರು. ಈ ವಿವಾದ ಭಾರೀ ಸುದ್ದಿ ಮಾಡಿತ್ತು.
webdunia


ಜಡೇಜಾಗೆ ವರ್ಷ ನಿಷೇಧ: 2009ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರನಾಗಿದ್ದ ರವೀಂದ್ರ ಜಡೇಜಾ, ಹೆಚ್ಚಿನ ಹಣಕ್ಕೆ ಇತರೆ ಫ್ರಾಂಚೈಸಿಗಳನ್ನ ಸಂಪರ್ಕಿಸಿದ್ದರು. ಇದು ಆಟಗಾರರ ನೀತಿ ಸಂಹಿತೆ ಉಲ್ಲಂಘನೆ ಗಂಭೀರ ಪ್ರಕರಣವಾದ್ದರಿಂದ 1 ವರ್ಷ ನಿಷೇಧ ಹೇರಲಾಗಿತ್ತು. ರಾಜಸ್ಥಾನ್ ತಂಡ ಜಡೇಜಾ ಜೊತೆಗಿನ ಒಪ್ಪಂದವನ್ನ ಮುಂದುವರೆಸಲಿಲ್ಲ.

webdunia
ಚಿಯರ್ ಗರ್ಲ್ ಕೆಣಕಿದ್ದ ಕ್ರಿಕೆಟಿಗರು: ಸೀಸನ್ 4ರಲ್ಲಿ ಸದ್ದುಮಾಡಿದ್ದು, ದಕ್ಷಿಣ ಆಫ್ರಿಕಾದ ಚಿಯರ್ ಲೀಡರ್ ಗೇಬ್ರಿಲ್ಲಾ ಬ್ಲಾಗ್, ಪಂದ್ಯದ ಬಳಿಕ ನಡೆಯುವ ರಾತ್ರಿ ಪಾರ್ಟಿಗಳಲ್ಲಿ ಕ್ರಿಕೆಟಿಗರು ನಮ್ಮನ್ನ ಮಾಂಸದ ತುಂಡಿನ ರೀತಿ ನೋಡುತ್ತಾರೆ. ಆಸೀಸ್ ಕ್ರಿಕೆಟಿಗರು ನಾಟಿ, ದಕ್ಷಿಣ ಆಪ್ರಿಕಾ ಕ್ರಿಕೆಟಿಗರು ಹಾರಿಬಲ್. ಭಾರತೀಯರು ಪೊಲೈಟ್ ಎಂದು ಬರೆದಿದ್ದರು. ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಗ್ರೇಮ್ ಸ್ಮಿತ್ ತನ್ನ ಲೈಂಗಿಕ ಅಂಗಾಂಗಗಳ ಮೇಲೆ ಕಣ್ಣು ಹಾಕಿದ್ದ. ಬಳಸಿಕೊಳ್ಲಲು ಯತ್ನಿಸಿದ್ದ ಎಂದೂ ಬರೆದಿದ್ದಳು. ಈ ವಿವಾದದ ಬಳಿಕ ಚಿಯರ್ ಗರ್ಲ್`ಗೆ ಗೇಟ್ ಪಾಸ್ ನೀಡಲಾಗಿತ್ತು.

ಮ್ಯಾಚ್ ಫಿಕ್ಸಿಂಗ್: 2011ರಲ್ಲಿ ನ್ಯೂಸ್ ಚಾನಲ್ ಸ್ಟಿಂಗ್ ಆಪರೇಶನ್ನಿನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿ ಸಿಕ್ಕಿಬಿದ್ದ ವೇಗಿ ಟಿ.ಪಿ. ಸುಧೀಂದ್ರ ಮತ್ತು ಶಲಬ್ ಶ್ರೀವಾಸ್ತವ್, ಬ್ಯಾಟ್ಸಮನ್`ಗಳಾದ ಮೊಹ್ಸಿನ್ ಮಿಶ್ರಾ, ಅಭಿನವ್ ಬಾಲಿ ಮತ್ತು ಅಮಿತ್ ಯಾದವ್`ಗೆ 5 ವರ್ಷ ನಿಷೇಧ ಹೇರಲಾಯ್ತು.

ವಾಂಖೆಡೆಯಿಂದ ಶಾರೂಖ್`ಗೆ ನಿಷೇಧ: 2012 ಐಪಿಎಲ್ ಪಂದ್ಯದ ವೇಳೆ ಶಾರೂಖ್, ವಾಂಖೆಡೆ ಸಿಬ್ಬಂದಿ ಜೊತೆ ಜಗಳ ತೆಗೆದು ಹಲ್ಲೆ ನಡೆಸಿದ್ದರು. ಹೀಗಾಗಿ, ಕ್ರೀಡಾಂಗಣ ಪ್ರವೆಶಿಸದಂತೆ 5 ವರ್ಷ ನಿಷೇಧ ಹೇರಲಾಗಿತ್ತು. 2015ರಲ್ಲಿ ನಿಷೇಧ ಹಿಂಪಡೆಯಲಾಯ್ತು.

webdunia
ಅಮೆರಿಕ ಮಹಿಳೆ ಮೈಮುಟ್ಟಿದ್ದ ಆರ್`ಸಿಬಿ ಆಟಗಾರ: ಆರ್`ಸಿಬಿಯಲ್ಲಿದ್ದ ಪೂಮರ್ ಬ್ಯಾಷ್ ನವದೆಹಲಿಯ ಹೋಟೆಲ್`ನಲ್ಲಿ ಅಮೆರಿಕ ಮಹಿಳೆಯನ್ನ ಹಿಡಿದು ಎಳೆದಾಡಿದ್ದ. ಬಳಿಕ ತಂಡದಿಂದ ಅಮಾನತು ಮಾಡಲಾಗಿತ್ತು. ಬಂಧನಕ್ಕೂ ಒಳಗಾಗಿದ್ದ ಪೂಮರ್ ಬ್ಯಾಚ್ ವಿರುದ್ಧ ನೀಡಿದ್ದ ದೂರನ್ನ ಮಹಿಳೆಯೇ ಹಿಂಪಡೆದಿದ್ದರು.

ಸ್ಪಾಟ್ ಫಿಕ್ಸಿಂಗ್: 2013ರಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರಾದ ಶ್ರೀಶಾಂತ್, ಅಜಿತ್ ಚಂಡೀಲಾ, ಅಂಕಿತ್ ಚವಾಣ್ ಅವರನ್ನ ಬಂಧಿಸಲಾಯ್ತು. ಬಳಿಕ ಅಜೀವ ನಿಷೇಧ ಹೇರಲಾಯ್ತು. ಇದು ಐಪಿಎಲ್`ನ ಅತ್ಯಂತ ದೊಡ್ಡ ಹಗರಣ.

webdunia
ಪ್ರೀತಿ ಜಿಂಟಾ-ನೆಸ್ ವಾಡಿಯಾ ಫೈಟ್: ಜೋಡಿಹಕ್ಕಿಗಳಾಗಿದ್ದ ಪ್ರೀತಿಜಿಂಟಾ ಮತ್ತು ನೆಸ್ ವಾಡಿಯಾ ಸಂಬಂದ ಹಳಸಿತ್ತು. ವಾಖೆಂಡೆ ಕ್ರೀಡಾಂಗಣದಲ್ಲೇ ಕಿತ್ತಾಡಿಕೊಂಡಿದ್ದರು. ನೆಸ್ ವಾಡಿಯಾ ವಿರುದ್ಧ ಪ್ರೀತಿ, ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಕೇಸ್ ದಾಖಲಿಸಿದ್ದರು.

ಮಿಚೆಲ್ ಸ್ಟಾರ್ಕ್-ಪೊಲ್ಲಾರ್ಡ್ ಕಚ್ಚಾಟ: 2014ರಲ್ಲಿ ಮೈದಾನದಲ್ಲೇ ಮಿಚೆಲ್ ಸ್ಟಾರ್ಕ್ ಮತ್ತು ಪೊಲ್ಲಾರ್ಡ್ ಗಲಾಟೆ ಮಾಡಿಕೊಂಡಿದ್ದರು. ಮುಂಬೈ ಬ್ಯಾಟ್ಸ್`ಮನ್ ಪೊಲ್ಲಾರ್ಡ್ ಪಕ್ಕಕ್ಕೆ ಸರಿದರು ಬಿಡದೆ ಆರ್`ಸಿಬಿ ವೇಗಿ ಸ್ಟಾರ್ಕ್ ಬ್ಯಾಟ್ ಎಸೆದಿದ್ದರು. ಕೋಪಗೊಂಡ ಪೊಲ್ಲಾರ್ಡ್ ಪ್ರತಿಯಾಗಿ ಬ್ಯಾಟ್ ಎಸೆದಿದ್ದರು.

ಎರಡು ತಂಡಕ್ಕೆ ನಿಷೇಧ: ಸುಪ್ರೀಂಕೋರ್ಟ್ ನೇಮಿಸಿದ್ದ ಲೋಧಾ ಸಮಿತಿ 2015ರಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ ತಂಡಕ್ಕೆ 2 ವರ್ಷ ನಿಷೇಧ ಹೇರಿತು. ಸ್ಪಾಟ್ ಫಿಕ್ಸಿಂಗ್, ಹಿತಾಸಕ್ತಿ ಸಂಘರ್ಷದ ಆರೋಪ ಈ ತಂಡಗಳ ಮೇಲಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿ, ಡಿವಿಲಿಯರ್ಸ್ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯ.. ಶೇನ್ ವಾಟ್ಸನ್ ಹೆಗಲಿಗೆ ಹೊಣೆ