Webdunia - Bharat's app for daily news and videos

Install App

ಶಶಾಂಕ್‌ ಸಿಂಗ್‌ ಸಿಡಿಲಬ್ಬರದ ಬ್ಯಾಟಿಂಗ್‌: ಪಂಜಾಬ್‌ಗೆ ರೋಚಕ ಗೆಲುವು

Sampriya
ಶುಕ್ರವಾರ, 5 ಏಪ್ರಿಲ್ 2024 (10:08 IST)
Photo Courtesy X
ಅಹಮದಾಬಾದ್: ಅಗ್ರ ಬ್ಯಾಟರ್‌ಗಳ ವೈಫಲ್ಯದಿಂದ ಕುಸಿತಕ್ಕೊಳಗಾದ ಪಂಜಾಬ್‌ ಕಿಂಗ್‌ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಶಕ್ತಿತುಂಬಿದ ಶಶಾಂಕ್‌ ಸಿಂಗ್‌ (ಔಟಾಗದೆ 61) ಗೆಲುವಿನ ರೂವಾರಿಯಾದರು. ಹೀಗಾಗಿ, ಜಯದ ಸನಿಹದಲ್ಲಿದ್ದ ಗುಜರಾಟ್‌ ಟೈಟನ್ಸ್‌ ತಂಡವನ್ನು ಮಣಿಸಿ ಶಿಖರ್‌ ಧವನ್‌ ಪಡೆಯು ಮೂರು ವಿಕೆಟ್‌ಗಳ ರೋಚಕ ಜಯ ದಾಖಲಿಸಿತು.

ಗುರುವಾರ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಟೈಟನ್ಸ್ ತಂಡವು ನಾಯಕ ಶುಭಮನ್‌ ಗಿಲ್ (ಅಜೇಯ 89) ಅವರ ಅಮೋಘ ಆಟದ ಬಲದಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 199 ರನ್ ಗಳಿಸಿತು. ಈ ಗುರಿಯನ್ನು ಕೊನೆಯ ಒಂದು ಎಸೆತ ಬಾಕಿ ಇರುವಂತೆ ಪಂಜಾಬ್‌ ತಂಡವು ಗಡಿ ದಾಟಿತು.
 

ಪಂಜಾಬ್‌ ತಂಡವು 70 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಶಿಖರ್‌ , ಜಾನಿ ಬೇಸ್ಟೊ ), ಸ್ಯಾಮ್ ಕರನ್ ಮತ್ತು ಸಿಕಂದರ್‌ ರಝಾ ಬೇಗನೇ ಔಟಾದರು. ಈ ಹಂತದಲ್ಲಿ ಶಶಾಂಕ್‌ ಉತ್ತಮವಾಗಿ ಇನಿಂಗ್ಸ್‌ ಕಟ್ಟಿದರು. ಅವರಿಗೆ ಅಶುತೋಷ್‌ ಶರ್ಮಾ ಮತ್ತು ಪ್ರಭಸಿಮ್ರನ್‌ ಸಿಂಗ್‌ ಸಾಥ್‌ ನೀಡಿದರು. ಹೀಗಾಗಿ, ತಂಡವು 19.5 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು.

ಪಂಜಾಬ್‌ ತಂಡಕ್ಕೆ ಈ ಆವೃತ್ತಿಯಲ್ಲಿ ಇದು ಎರಡನೇ ಗೆಲುವಾಗಿದೆ. ಪಾಯಿಂಟ್‌ ಪಟ್ಟಿಯಲ್ಲಿ ಕಿಂಗ್ಸ್‌ ತಂಡವು 7ರಿಂದ ಐದನೇ ಸ್ಥಾನಕ್ಕೆ ಬಡ್ತಿ ಪಡೆಯಿತು. ಟೈಟನ್ಸ್‌ ತಂಡವು ಐದನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಜಾರಿತು.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಮುಂದಿನ ಸುದ್ದಿ
Show comments