ಅಹಮ್ಮದಾಬಾದ್: ಗುಜರಾತ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022 ರ ಫೈನಲ್ ಪಂದ್ಯದಲ್ಲಿ ಪ್ರೇಕ್ಷಕರೂ ದಾಖಲೆ ಮಾಡಿದ್ದಾರೆ.
ಇದು ಜಗತ್ತಿನ ಅತೀ ದೊಡ್ಡ ಮೈದಾನವಾಗಿದ್ದು, ಒಂದು ಲಕ್ಷ ಪ್ರೇಕ್ಷಕರು ಏಕಕಾಲಕ್ಕೆ ಕೂತು ಪಂದ್ಯ ವೀಕ್ಷಿಸಬಹುದಾಗಿದೆ. ನಿನ್ನೆಯ ಪಂದ್ಯದಲ್ಲಿ ಈ ದಾಖಲೆಯಾಗಿದೆ. ಐಪಿಎಲ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾದವರ ಸಂಖ್ಯೆ 1,04,859 ಲಕ್ಷ ಮಂದಿ.
ಇದುವರೆಗೆ ಮೆಲ್ಬೋರ್ನ್ ನಲ್ಲಿ ನಡೆದಿದ್ದ ಪಾಕ್-ಆಸೀಸ್ ಪಂದ್ಯಕ್ಕೆ 87 ಸಾವಿರ ಮಂದಿ ಹಾಜರಾಗಿದ್ದು ದಾಖಲೆಯಾಗಿತ್ತು. ಆದರೆ ಈ ಪಂದ್ಯ ಗರಿಷ್ಠ ಪ್ರೇಕ್ಷಕರ ಹಾಜರಾತಿ ದಾಖಲೆ ಮಾಡಿದೆ.