ಚೆನ್ನೈ: ಎರಡು ವರ್ಷಗಳ ನಿಷೇಧ ಶಿಕ್ಷೆ ಮುಗಿಸಿಕೊಂಡು ಕಣಕ್ಕಿಳಿಯುತ್ತಿರುವ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಲಿರುವ ಧೋನಿಯನ್ನು ಸೆಳೆಯಲು ಹಲವು ಫ್ರಾಂಚೈಸಿಗಳು ಪ್ರಯತ್ನ ನಡೆಸಿದ್ದವಂತೆ!
ಹಾಗಂತ ಅವರೇ ಹೇಳಿಕೊಂಡಿದ್ದಾರೆ. ‘ನನಗೆ ಹಲವು ಮಾಲಿಕರಿಂದ ಆಫರ್ ಇತ್ತು. ಆದರೆ ಚೆನ್ನೈ ತಂಡಕ್ಕೆ ಮರಳುತ್ತಿರುವುದು ನನಗೆ ವಿಶೇಷವಾಗಿದೆ. ಇದು ನನ್ನ ಎರಡನೇ ತವರಿದ್ದಂತೆ. ಇಲ್ಲಿನ ಜನ ನನ್ನನ್ನು ಇಲ್ಲಿನ ಮಗನಾಗಿ ಕಾಣುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನದನ್ನು ನಾನೇನೂ ಕೇಳಲಾರೆ’ ಎಂದು ಧೋನಿ ಹೇಳಿಕೊಂಡಿದ್ದಾರೆ.
ಇದೇ ವೇಳೆ ತಮ್ಮ ಜತೆಗೆ ಹಳೆಯ ಟೀಂ ಸಹವರ್ತಿ ರವಿಚಂದ್ರನ್ ಅಶ್ವಿನ್ ರನ್ನೂ ತಂಡದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುವುದಾಗಿ ಧೋನಿ ಹೇಳಿಕೊಂಡಿದ್ದಾರೆ. ಇದು ಚೆನ್ನೈ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ