ಮುಂಬೈ: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಒಂದೇ ಒಂದು ವಿಕೆಟ್ ಕಳೆದುಕೊಳ್ಳದೇ 20 ಓವರ್ ನಿಭಾಯಿಸಿದ ಲಕ್ನೋ ತಂಡದ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಹೊಸ ದಾಖಲೆ ಬರೆದಿದೆ.
20 ಓವರ್ ನಿಭಾಯಿಸಿದ ರಾಹುಲ್-ಡಿ ಕಾಕ್ 210 ರನ್ ಪೇರಿಸಿದರು. ಈ ಪೈಕಿ ರಾಹುಲ್ ಕೊಡುಗೆ 68 ರನ್ ಗಳಾದರೆ ಕ್ವಿಂಟನ್ ಡಿ ಕಾಕ್ ಭರ್ಜರಿ ಶತಕ ಗಳಿಸಿ 140 ರನ್ ಗಳಿಸಿ ಮಿಂಚಿದರು.
ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೊದಲ ವಿಕೆಟ್ ಗೆ ಅಜೇಯ ಅತ್ಯಧಿಕ ರನ್ ಗಳ ಜೊತೆಯಾಟವಾಡಿದ ದಾಖಲೆ ಮಾಡಿದರು. ಈ ಮೊದಲು ಹೈದರಾಬಾದ್ ನ ವಾರ್ನರ್-ಬೇರ್ ಸ್ಟೋ ಜೋಡಿ 185 ರನ್ ಗಳಿಸಿದ್ದು ದಾಖಲೆಯಾಗಿತ್ತು.