Webdunia - Bharat's app for daily news and videos

Install App

IPL 2025: ಆರ್‌ಸಿಬಿಯ ಪ್ಲೇ ಆಫ್‌ ಲೆಕ್ಕಾಚಾರ, ತವರಿನಲ್ಲಿ ಕನಿಷ್ಠ ಎರಡು ಪಂದ್ಯ ಗೆಲ್ಲಲೇಬೇಕಾದ ಒತ್ತಡ

Sampriya
ಮಂಗಳವಾರ, 22 ಏಪ್ರಿಲ್ 2025 (18:57 IST)
Photo Courtesy X
ಬೆಂಗಳೂರು: ಕಳೆದ ಐಪಿಎಲ್‌ನಲ್ಲಿ ಕೊನೆಯ ಹಂತದಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿ ಪ್ಲೇ ಆಫ್‌ ಪ್ರವೇಶಿಸಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಈ ಬಾರಿ ತವರಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಮುಗ್ಗರಿಸಿದೆ. ಆದರೆ, ತವರಿನಾಚೆ ನಡೆದ ಐದು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈವರೆಗೆ 8 ಪಂದ್ಯಗಳನ್ನಾಡಿದೆ. ಇನ್ನುಳಿದಿರುವುದು ಕೇವಲ 6 ಪಂದ್ಯಗಳು ಮಾತ್ರ. ಈ ಆರು ಮ್ಯಾಚ್​ಗಳಲ್ಲಿ 4 ಪಂದ್ಯಗಳನ್ನು ತವರಿನಲ್ಲಿ ಆಡಿದರೆ, ಇನ್ನೆರಡು ಪಂದ್ಯಗಳನ್ನು ದೆಹಲಿ ಮತ್ತು ಲಖನೌದಲ್ಲಿ ಆಡಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ರ ಮೊದಲಾರ್ಧ ಮುಗಿದು ದ್ವಿತೀಯಾರ್ಧದ ಪಂದ್ಯಗಳು ಶುರುವಾಗಿದೆ. ದ್ವಿತೀಯಾರ್ಧದ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದಿದೆ. ಈ ಗೆಲುವಿನೊಂದಿಗೆ ಆರ್​ಸಿಬಿ ತಂಡವು ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.

ಸದ್ಯ ಮೂರನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂದಿನ 6 ಪಂದ್ಯಗಳು ಬಹಳ ಮುಖ್ಯ. ಏಕೆಂದರೆ ಈ ಆರು ಮ್ಯಾಚ್​ಗಳಲ್ಲಿ ಭರ್ಜರಿ ಜಯ ಸಾಧಿಸಿದರೆ ಆರ್​ಸಿಬಿ ನೇರವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು. ಸಾಮಾನ್ಯವಾಗಿ ಪ್ಲೇಆಫ್​ ಪ್ರವೇಶಿಸಲು 16 ಅಂಕಗಳನ್ನು ಪಡೆದರೆ ಸಾಕು.

ಇದೀಗ ಆರ್​ಸಿಬಿ ತಂಡವು ಒಟ್ಟು 10 ಅಂಕಗಳನ್ನು ಹೊಂದಿದೆ. ಇನ್ನುಳಿದ 6 ಮ್ಯಾಚ್​ಗಳಲ್ಲಿ 3 ರಲ್ಲಿ ಗೆದ್ದರೆ 16 ಅಂಕಗಳು ಆಗಲಿದೆ. ಆದರೆ ಆರ್​ಸಿಬಿ ತಂಡವು ಮುಂದಿನ 6 ಪಂದ್ಯಗಳಲ್ಲಿ 4 ಮ್ಯಾಚ್​ಗಳನ್ನು ತವರಿನಲ್ಲಿ ಆಡಬೇಕಿದೆ. ಪ್ಲೇ ಆಫ್‌ಗೆ ಪ್ರವೇಶಿಸಲು ತವರಿನ ಗೆಲುವು ಅನಿವಾರ್ಯ.

ತವರು ಮೈದಾನದಲ್ಲಿ ಆರ್​ಸಿಬಿ ಆಡಲಿರುವ 4 ಮ್ಯಾಚ್​ಗಳಲ್ಲಿ ಕನಿಷ್ಠ 2 ಗೆಲುವು ಅತ್ಯವಶ್ಯಕ. ಇನ್ನುಳಿದ 2 ಪಂದ್ಯಗಳಲ್ಲಿ 1 ಗೆಲುವು ದಾಖಲಿಸಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 16 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಆರ್​ಸಿಬಿ ಪ್ಲೇಆಫ್ ಹಂತಕ್ಕೇರಬಹುದು.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Bengaluru Rain: ಇಂದಿನ KKR vs RCB ಪಂದ್ಯಾಟದ ಟಿಕೆಟ್ ಖರೀದಿಸಿದವರಿಗೆ ಬಿಗ್ ಶಾಕ್‌

ನೀರಜ್‌ ಚೋಪ್ರಾ ಹೊಸ ಮೈಲಿಗಲ್ಲು: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ

Rohit Sharma: ಆ ಸ್ಟ್ಯಾಂಡ್ ಗೇ ಸಿಕ್ಸರ್ ಹೊಡಿ ಎಂದ ರವಿಶಾಸ್ತ್ರಿ: ರೋಹಿತ್ ಶರ್ಮಾ ಉತ್ತರ ವಿಡಿಯೋ ನೋಡಿ

Rohit Sharma video: ಎಲ್ಲರ ಎದುರೇ ಸಹೋದರನಿಗೆ ಬೈದ ರೋಹಿತ್ ಶರ್ಮಾ

Rohit Sharma Video: ಗುದ್ಬಿಡ್ತೀನಿ ನೋಡು: ಅಭಿಮಾನಿ ಜೊತೆ ರೋಹಿತ್ ಶರ್ಮಾ ಕೀಟಲೆ

ಮುಂದಿನ ಸುದ್ದಿ
Show comments