ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ತಂಡ ಮುಸ್ಲಿಂ ಧರ್ಮೀಯ ಕ್ರಿಕೆಟಿಗರು ಈಗ ಪವಿತ್ರ ರಮ್ಜಾನ್ ಮಾಸದ ನಿಮಿತ್ತ ಉಪವಾಸ ನಡೆಸುತ್ತಿದ್ದಾರೆ. ಇವರಿಗೆ ಈಗ ನಾಯಕ ಡೇವಿಡ್ ವಾರ್ನರ್ ಮತ್ತು ಕೇನ್ ವಿಲಿಯಮ್ಸನ್ ಕೂಡಾ ಜೊತೆಯಾಗಿದ್ದಾರೆ.
ಹೈದರಾಬಾದ್ ತಂಡ ಪ್ರತಿನಿಧಿಸುತ್ತಿರುವ ರಶೀರ್ ಖಾನ್, ಮುಜೀಬ್ ರಹಮಾನ್ ಇತ್ಯಾದಿ ಮುಸ್ಲಿಂ ಧರ್ಮೀಯ ಕ್ರಿಕೆಟಿಗರು ಉಪವಾಸ ಮಾಡುತ್ತಿದ್ದಾರೆ. ಅವರ ಜೊತೆಗೆ ಈಗ ವಾರ್ನರ್, ವಿಲಿಯಮ್ಸನ್ ಕೂಡಾ ಸೇರಿಕೊಂಡಿದ್ದಾರಂತೆ.
ಇದನ್ನು ಸ್ವತಃ ರಶೀದ್ ಖಾನ್ ಬಹಿರಂಗಪಡಿಸಿದ್ದಾರೆ. ಉಪವಾಸವಿರಲು ಚೆನ್ನಾಗಿರುತ್ತದೆ. ಆದರೆ ನನಗೆ ಬಾಯಾರಿಕೆ ಆಗುತ್ತಿದೆ, ಬಾಯಿ ಒಣಗುತ್ತಿದೆ ಎಂದಿದ್ದಾರೆ ವಾರ್ನರ್. ಅತ್ತ ವಿಲಿಯಮ್ಸನ್ ಇದು ಉತ್ತಮ ಅನುಭವ, ಅದಕ್ಕಾಗಿ ಧನ್ಯವಾದ ಎಂದಿದ್ದಾರೆ.