ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಸಾಲು ಕೊರೋನಾ ಪ್ರಕರಣಗಳು ದಾಖಲಾದ ಬೆನ್ನಲ್ಲೇ ಈಗ ಐಪಿಎಲ್ 13 ರ ಮೊದಲ ಪಂದ್ಯಕ್ಕೇ ಆತಂಕ ಎದುರಾಗಿದೆ.
ಚೆನ್ನೈ ತಂಡದಲ್ಲಿ ಈಗಾಗಲೇ ಹಲವು ಮಂದಿ ಕೊರೋನಾ ಸೋಂಕಿಗೊಳಗಾಗಿದ್ದಾರೆ. ಹೀಗಾಗಿ ಆಟಗಾರರು ಇನ್ನೂ 14 ದಿನ ಕ್ವಾರಂಟೈನ್ ಗೊಳಗಾಗಬೇಕಿದೆ. ಹೀಗಾಗಿ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಚೆನ್ನೈಗೆ ಪಂದ್ಯವಾಡಲು ಸಾಧ್ಯವಾಗದು. ಹೀಗಾಗಿ ಐಪಿಎಲ್ 13 ರ ಆರಂಭಿಕ ಪಂದ್ಯಕ್ಕೇ ವಿಘ್ನ ಎದುರಾಗಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಬದಲು ಮುಂಬೈ ಬೇರೊಂದು ತಂಡದ ಎದುರು ಆಡಬೇಕಾಗಬಹುದು.