Publish Date: Thu, 05 May 2022 (09:50 IST)
Updated Date: Thu, 05 May 2022 (05:57 IST)
ಮುಂಬೈ: ಐಪಿಎಲ್ ನಲ್ಲಿ ಮತ್ತೆ ನಾಯಕತ್ವ ಪಡೆದುಕೊಂಡಿರುವ ಧೋನಿ ನಿನ್ನೆಯ ಪಂದ್ಯದಲ್ಲಿ ಹೊಸ ದಾಖಲೆಯೊಂದನ್ನು ಮಾಡಿದ್ದಾರೆ.
ನಾಯಕನಾಗಿ ಒಂದೇ ಫ್ರಾಂಚೈಸಿ ಪರ 200 ನೇ ಐಪಿಎಲ್ ಆಡಿದ ಸಿಎಸ್ ಕೆ ಕ್ಯಾಪ್ಟನ್ ಧೋನಿ ಈ ಮೂಲಕ ವಿರಾಟ್ ಕೊಹ್ಲಿ ಜೊತೆ ದಾಖಲೆ ಹಂಚಿಕೊಂಡಿದ್ದಾರೆ.
ಧೋನಿ ಇದುವರೆಗೆ ಒಟ್ಟು 230 ಐಪಿಎಲ್ ಪಂದ್ಯಗಳನ್ನಾಡಿದ್ದು, ಈ ಪೈಕಿ ಸಿಎಸ್ ಕೆ ಪರವೇ 200 ಪಂದ್ಯಗಳನ್ನಾಡಿದ್ದಾರೆ. ವಿರಾಟ್ ಕೊಹ್ಲಿ ಆರ್ ಸಿಬಿ ಪರ ಇದುವರೆಗೆ 218 ಪಂದ್ಯಗಳನ್ನಾಡಿದ್ದಾರೆ.