Webdunia - Bharat's app for daily news and videos

Install App

IPL ಟೂರ್ನಿಗೆ ದಿನಗಣನೆ: ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಕ್ಷರ್‌ ಪಟೇಲ್‌ ಸಾರಥಿ: ರಾಹುಲ್‌ಗೆ ಕೈಕೊಟ್ಟ ಫ್ರ್ಯಾಂಚೈಸಿ

Sampriya
ಶುಕ್ರವಾರ, 14 ಮಾರ್ಚ್ 2025 (15:19 IST)
Photo Courtesy X
ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ದಿನಗಣನೆ ಆರಂಭವಾಗಿದೆ. ಅದಕ್ಕೂ ಮುನ್ನ ಕೆಲ ತಂಡಗಳಿಗೆ ಸಾರಥಿಗಳ ಆಯ್ಕೆ ನಡೆಯುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನಾಯಕನಾಗಿ ಆಲ್‌ರೌಂಡರ್‌ ಅಕ್ಷರ್ ಪಟೇಲ್ ನೇಮಕಗೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವ ರೇಸ್‌ನಲ್ಲಿ ಅಕ್ಷರ್‌ ಪಟೇಲ್‌ ಮತ್ತು ಕನ್ನಡಿಗ ಕೆ.ಎಲ್‌. ರಾಹುಲ್‌ ಮುಂಚೂಣಿಯಲ್ಲಿದ್ದರು. ಇದೀಗ ಅಕ್ಷರ್‌ ಪಟೇಲ್‌ಗೆ ಫ್ರ್ಯಾಂಚೈಸಿ ಮಣೆಹಾಕಿದೆ. ಕಳೆದ ಆರು ವರ್ಷಗಳಿಂದ ಅಕ್ಷರ್‌ ಅವರು ಕ್ಯಾಪಿಟಲ್ಸ್‌ ತಂಡದ ಭಾಗವಾಗಿದ್ದರು.

2024ರ ಮೆಗಾ ಹರಾಜಿಗೆ ಮುನ್ನ ₹ 16.50 ಕೋಟಿಗೆ ಕ್ಯಾಪಿಟಲ್ಸ್‌ ತಂಡದ ಗರಿಷ್ಠ ರಿಟರ್ನ್ ಆಗಿದ್ದರು. ನಾಯಕತ್ವದ ಅನುಭವವಿಲ್ಲದಿದ್ದರೂ 2025ರ ಜನವರಿಯಲ್ಲಿ ಅವರು ಭಾರತದ ಟಿ20 ತಂಡದ ಉಪನಾಯಕರಾಗಿದ್ದರು. ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಜಾರೆ ಟ್ರೋಫಿಗಳು ಸೇರಿದಂತೆ 23 ಪಂದ್ಯಗಳಲ್ಲಿ ಗುಜರಾತ್ ಅನ್ನು ಮುನ್ನಡೆಸಿ ಅನುಭವ ಹೊಂದಿದ್ದಾರೆ.

ಕ್ಯಾಪಿಟಲ್ಸ್‌ ತಂಡವು ಮಾರ್ಚ್ 24 ರಂದು ವಿಶಾಖಪಟ್ಟಣಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. ಕಳೆದ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂಕಪಟ್ಟಿಯಲ್ಲಿ ಆರನೇ ಸ್ಥಾನದೊಂದಿಗೆ 14 ಅಂಕಗಳನ್ನು ಗಳಿಸಿತ್ತು.


ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಪಂದ್ಯ ನಿಂತ್ರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಿರಾಕಲ್‌ಗೆ ಕೊಹ್ಲಿ ಅಭಿಮಾನಿಗಳು ಫುಲ್ ಖುಷ್‌, Video Viral

ಮುಂದಿನ ಸುದ್ದಿ
Show comments