Publish Date: Tue, 13 Oct 2020 (09:16 IST)
Updated Date: Tue, 13 Oct 2020 (09:18 IST)
ದುಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಇನ್ನು ಒಂದು ವಾರ ಐಪಿಎಲ್ ಆಡುವಂತಿಲ್ಲ. ಇದನ್ನು ಡೆಲ್ಲಿ ನಾಯಕ ಶ್ರೇಯಸ್ ಐಯರ್ ಖಚಿತಪಡಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಿಷಬ್ ಗಾಯಕ್ಕೊಳಗಾಗಿದ್ದರು. ಹೀಗಾಗಿ ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಆಡಿರಲಿಲ್ಲ. ರಿಷಬ್ ಅನುಪಸ್ಥಿತಿ ತಂಡದ ರನ್ ಗಳಿಕೆ ಮೇಲೆ ಭಾರೀ ಪರಿಣಾಮ ಬೀರಿತ್ತು. ಇದೀಗ ಅವರ ಗಾಯದ ಗಂಭೀರತೆಯಿಂದಾಗಿ ಒಂದು ವಾರದ ವಿಶ್ರಾಂತಿ ಅನಿವಾರ್ಯ ಎಂದು ಐಯರ್ ಹೇಳಿದ್ದಾರೆ. ಹೀಗಾಗಿ ಡೆಲ್ಲಿ ಪಂತ್ ಜಾಗಕ್ಕೆ ಅಲೆಕ್ಸ್ ಕ್ಯಾರಿಗೆ ಸ್ಥಾನ ನೀಡಿದೆ.