Publish Date: Thu, 12 Nov 2020 (08:49 IST)
Updated Date: Thu, 12 Nov 2020 (08:50 IST)
ಮುಂಬೈ: ಐಪಿಎಲ್ 13 ಈಗಷ್ಟೇ ಮುಕ್ತಾಯಗೊಂಡಿದ್ದು, ಐಪಿಎಲ್ 14 ಗೆ ಈಗಲೇ ತಯಾರಿ ಶುರುವಾಗಿದೆ. ಜನವರಿ, ಫೆಬ್ರವರಿಯಲ್ಲಿ ಹರಾಜು ಪ್ರಕ್ರಿಯೆ ನಡೆಯುವ ಸಾಧ‍್ಯತೆಯಿದೆ.
ಮೂಲಗಳ ಪ್ರಕಾರ ಮುಂದಿನ ಐಪಿಎಲ್ ಮತ್ತೊಂದು ಹೊಸ ತಂಡ ಸೇರ್ಪಡೆಯಾಗುವ ಸಾಧ‍್ಯತೆಯಿದೆ. ಅದು ಗುಜರಾತ್ ನಿಂದ ಆಗಿರಬಹುದು ಎನ್ನಲಾಗುತ್ತಿದೆ. ಆದರೆ ಇದು ಇನ್ನೂ ಕನ್ ಫರ್ಮ್ ಆಗಿಲ್ಲ. ಏಪ್ರಿಲ್-ಮೇಯಲ್ಲಿ ಭಾರತದಲ್ಲೇ ಮುಂದಿನ ಐಪಿಎಲ್ ನಡೆಯಲಿದೆ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಈ ಐಪಿಎಲ್ ನ್ನು ಮತ್ತಷ್ಟು ಆಕರ್ಷಕವಾಗಿ ಮಾಡಲು ಹೊಸ ತಂಡಗಳ ಸೇರ್ಪಡೆ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ. ಹಿಂದೆ ಇದ್ದ ಪುಣೆ ತಂಡವೂ ಮತ್ತೆ ಬಂದರೂ ಅಚ್ಚರಿಯಿಲ್ಲ.