Publish Date: Tue, 20 Oct 2020 (10:35 IST)
Updated Date: Tue, 20 Oct 2020 (10:36 IST)
ದುಬೈ: ಐಪಿಎಲ್ 13 ರಲ್ಲಿ ಸರಾಗವಾಗಿ ರನ್ ಗಳಿಸುವುದರ ಜತೆಗೆ ಮೊನ್ನೆಯ ಸೂಪರ್ ಓವರ್ ಪಂದ್ಯದಲ್ಲಿ ಅದ್ಭುತವಾಗಿ ಕೀಪಿಂಗ್ ಮಾಡಿ ತಂಡಕ್ಕೆ ಗೆಲುವು ಕೊಡಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬರು ‘ತಲಾ’ ಎಂದು ಕರೆದಿದ್ದಾರೆ.
ತಮಿಳಿನ ತಲಾ ಎಂಬ ಗೌರವ ಪದವನ್ನು ತನಗೆ ಅಭಿಮಾನಿಯೊಬ್ಬರು ನೀಡಿದ್ದಕ್ಕೆ ಕೆಎಲ್ ರಾಹುಲ್ ಪ್ರತಿಕ್ರಿಯೆ ನೀಡಿದ್ದು, ‘ಕ್ರಿಕೆಟ್ ನಲ್ಲಿ ಒಬ್ಬರೇ ಒಬ್ಬರು ತಲಾ ಇರುವುದು. ಅವರು ಯಾರೆಂದು ನಿಮಗೆ ಗೊತ್ತು’ ಎಂದಿದ್ದಾರೆ. ತಲಾ ಎಂದು ಧೋನಿಗೆ ಕರೆಯಲಾಗುತ್ತಿದೆ. ದಿಗ್ಗಜ ಕ್ರಿಕೆಟಿಗನಿಗೆ ಕರೆಯುವ ಹೆಸರನ್ನು ತನಗೆ ನೀಡಬೇಡಿ. ಅದು ಅವರಿಗೆ ಮಾತ್ರ ಮೀಸಲು ಎಂದು ರಾಹುಲ್ ವಿನಯವಂತಿಕೆ ತೋರಿಸಿದ್ದಾರೆ.