Publish Date: Mon, 26 Oct 2020 (09:50 IST)
Updated Date: Mon, 26 Oct 2020 (09:52 IST)
ದುಬೈ: ಐಪಿಎಲ್ 13 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ನಿನ್ನೆಯ ಪಂದ್ಯವನ್ನು ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟಿಗರಿಗೆ ನಾಯಕ ವಿರಾಟ್ ಕೊಹ್ಲಿ ಸಾಂತ್ವನಿಸಿದ್ದಾರೆ.
ಸೋತರೂ ತಮ್ಮ ತಂಡವನ್ನು ಸಮರ್ಥಿಸಿಕೊಂಡು ಸ್ಪೂರ್ತಿ ತುಂಬಿರುವ ಕೊಹ್ಲಿ ಮುಂದಿನ ಪಂದ್ಯಕ್ಕೆ ಉತ್ಸಾಹದಿಂದ ತಯಾರಾಗೋಣ ಎಂದು ಸಂದೇಶ ನೀಡಿದ್ದಾರೆ. ಈ ಪಂದ್ಯದಲ್ಲಿ ಮಾಡಿದ ತಪ್ಪನಿಂದ ಪಾಠ ಕಲಿತು ಮುಂದಿನ ಪಂದ್ಯಕ್ಕೆ ತಯಾರಾಗೋಣ ಎಂದು ಸ್ಪೂರ್ತಿಯುತ ಸಂದೇಶ ನೀಡಿದ್ದಾರೆ.